ದೇಶ

ಭದ್ರಾಚಲಂ ದೇವಾಲಯದಲ್ಲಿ ಲಕ್ಷಾಂತರ ರು. ಮೌಲ್ಯದ ಆಭರಣ ಕಳ್ಳತನ

ಭಕ್ತಾದಿಗಳು ದೇವರಿಗೆ ಅರ್ಪಿಸಿದ್ದ ಸುಮಾರು ಎರಡೂವರೆ ಲಕ್ಷ ರು.ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಭದ್ರಾಚಲಂ ನಲ್ಲಿರುವ ಶ್ರೀ ಸೀತಾರಾಮ ಸ್ವಾಮಿ ...

ಭದ್ರಾಚಲಂ ದೇವಾಲಯದಲ್ಲಿ ಲಕ್ಷಾಂತರ ರು. ಮೌಲ್ಯದ ಆಭರಣ ಕಳ್ಳತನ
ಭದ್ರಾಚಲಂ ದೇವಾಲಯ
Published On :

ಕಮ್ಮಾಮ್: ಭಕ್ತಾದಿಗಳು ದೇವರಿಗೆ ಅರ್ಪಿಸಿದ್ದ ಸುಮಾರು ಎರಡೂವರೆ ಲಕ್ಷ ರು.ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಭದ್ರಾಚಲಂ ನಲ್ಲಿರುವ ಶ್ರೀ ಸೀತಾರಾಮ ಸ್ವಾಮಿ ದೇವಾಲಯದಲ್ಲಿ ನಡೆದಿದೆ.

ದೇವರ ಆಭರಣ ನಾಪತ್ತೆಯಾಗಿರುವುದನ್ನು ಕಳೆದ ಶುಕ್ರವಾರ ದೇವಾಲಯದ ಪ್ರಧಾನ ಅರ್ಚಕ ಜಗನ್ನಾದಚಾರ್ಯಲು ಗಮನಿಸಿದ್ದಾರೆ.

ದೇವಾಲಯದಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಇಂಥಹ ಘಟನೆಗಳು ನಡೆದಿದ್ದು, ದತ್ತಿ ಇಲಾಖೆ ಸಚಿವ ಇಂದ್ರ ಕರಣ್ ರೆಡ್ಡಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಆಭರಣ ಕಳ್ಳತನದಲ್ಲಿ ದೇವಾಲಯದ ಒಳಗಿನ ಕೆಲವರ ಕೈವಾಡ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತ ಪಡಿಸಿದ್ದಾರೆ. ಕದ್ದ ಆಭರಣಗಳನ್ನು ವಾಪಸ್ ತಂದಿಡಲು ಸಮಯ ನೀಡಿದ್ದು, ಆ ಗಡುವಿನಲ್ಲಿ ಆಭರಣವನ್ನು ದೇವಾಲಯಕ್ಕೆ ಮರಳಿಸದಿದ್ದರೇ ಪೊಲೀಸರಿಗೆ ದೂರು ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.

ಈ ಸಂಬಂಧ ಎಲ್ಲಾ ಅರ್ಚಕರ ಸಭೆ ಕರೆದು ಚರ್ಚೆ ನಡೆಸಿರುವ ಆಡಳಿತ ಮಂಡಳಿ, ದೇವಾಲಯದಲ್ಲಿರುವ ಚಿನ್ನದ ಆಭರಣಗಳ ಪಟ್ಟಿ ನೀಡುವಂತೆ ಸೂಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.