ಉತ್ತರ ಪ್ರದೇಶದಲ್ಲಿ ನಕಲಿ ಗೋರಕ್ಷಕನ ಬಂಧನ
ಗೋರಕ್ಷಣೆ ಹೆಸರಿನಲ್ಲಿ ಸುಲಿಗೆ, ಹಲ್ಲೆ ನಡೆಸುತ್ತಿದ್ದ ಆರೋಪದಲ್ಲಿ ಪಂಜಾಬ್ ಮೂಲದ ಗೋರಕ್ಷಕನೊಬ್ಬನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.

ಚಂಡೀಗಢ: ಗೋರಕ್ಷಣೆ ಹೆಸರಿನಲ್ಲಿ ಸುಲಿಗೆ, ಹಲ್ಲೆ ನಡೆಸುತ್ತಿದ್ದ ಆರೋಪದಲ್ಲಿ ಪಂಜಾಬ್ ಮೂಲದ ಗೋರಕ್ಷಕನೊಬ್ಬನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.
ಬಂಧಿತ ನಕಲಿ ಗೋರಕ್ಷಕನನ್ನು ಸತೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಹಲ್ಲೆ ನಡೆಸಿದ, ಲೂಟಿ ಮಾಡಿರುವ ಆರೋಪಗಳಿವೆ. ಗೋರಕ್ಷಣೆ ಹೆಸರಿನಲ್ಲಿ ಸತೀಶ್ ಕುಮಾರ್ ನೇತೃತ್ವದ ಸಂಘಟನೆ ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ, ಲೂಟಿ ನಡೆಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಸತೀಶ್ ಕುಮಾರ್ ಸಂಘಟನೆಯ ಸದಸ್ಯರು ಗೋರಕ್ಷಣೆಯ ವೇಳೆ ಜನರನ್ನು ಥಳಿಸುತ್ತಿದ್ದ ವಿಡಿಯೋ ಬಹಿರಂಗವಾಗಿದೆ. ಹಲ್ಲೆಗೊಳಗಾದವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸತೀಶ್ ಕುಮಾರ್ ನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


