ದೇಶ

ಬುಲೆಟ್ ಪ್ರೂಫ್ ಹೆಲ್ಮೆಟ್ ಇದ್ದಿದ್ದರೆ ಪ್ರಮೋದ್ ಕುಮಾರ್ ಹುತಾತ್ಮರಾಗುತ್ತಿರಲಿಲ್ಲ!

ವೀರಯೋಧ ಪ್ರಮೋದ್ ಕುಮಾರ್ ಬುಲೆಟ್ ಪ್ರೂಫ್ ಹೆಲ್ಮೆಟ್ ಇದಿದ್ದರೆ ಸಾಯುತ್ತಿರಲಿಲ್ಲ ಎಂದು ಅವರ ಸ್ನೇಹಿತ ಹಾಗೂ ಸಹೋದ್ಯೋಗಿ ಯೋಧರೊಬ್ಬರು ನೋವಿನಿಂದ ಹೇಳಿದ್ದಾರೆ.

ಬುಲೆಟ್ ಪ್ರೂಫ್ ಹೆಲ್ಮೆಟ್ ಇದ್ದಿದ್ದರೆ ಪ್ರಮೋದ್ ಕುಮಾರ್ ಹುತಾತ್ಮರಾಗುತ್ತಿರಲಿಲ್ಲ!
ಹುತಾತ್ಮ ಯೋಧ ಪ್ರಮೋದ್ ಕುಮಾರ್
Published On :

ಶ್ರೀನಗರ: ಸ್ವಾತಂತ್ರೋತ್ಸವ ನಿಮಿತ್ತ ಧ್ವಜಾರೋಹಣ ಮಾಡಿದ ಕೆಲವೇ ಗಂಟೆಗಳಲ್ಲಿ ನೌಹಟ್ಟಾದಲ್ಲಿ ನಡೆದ ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ವೀರಯೋಧ ಪ್ರಮೋದ್  ಕುಮಾರ್ ಬುಲೆಟ್ ಪ್ರೂಫ್ ಹೆಲ್ಮೆಟ್ ಇದಿದ್ದರೆ ಸಾಯುತ್ತಿರಲಿಲ್ಲ ಎಂದು ಅವರ ಸ್ನೇಹಿತ ಹಾಗೂ ಸಹೋದ್ಯೋಗಿ ಯೋಧರೊಬ್ಬರು ನೋವಿನಿಂದ ಹೇಳಿದ್ದಾರೆ.

ಹುತಾತ್ಮಯೋಧ ಪ್ರಮೋದ್ ಕುಮಾರ್ ಅವರ ಅಂತ್ಯ ಸಂಸ್ಕ್ರಾರದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಆರ್ ಫಿಎಫ್ ನ ವಕ್ತಾರರು ಕೂಡ ಆಗಿರುವ ಭುವೇಶ್ ಚೌದರಿ ಅವರು,  ಪ್ರಮೋದ್ ಕುಮಾರ್ 49 ಬೆಟಾಯಲಿಯನ್ ಸೇನಾಪಡೆಯ ಸೇನಾಧಿಕಾರಿಯಾಗಿದ್ದು, ಕರಣ್ ನಗರದಲ್ಲಿರುವ ಸಿಆರ್ ಪಿಎಫ್ ಡಿಐಜಿ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ  ಮುಗಿಸಿಕೊಂಡು ಕ್ಯಾಂಪ್ ಗೆ ವಾಪಸ್ ಆಗಿದ್ದೆವು. ಆಗ ನೌಹಟ್ಟಾದಲ್ಲಿ ಉಗ್ರರು ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ಕುರಿತು ಮಾಹಿತಿ ಲಭ್ಯವಾಯಿತು. ಪ್ರಮೋದ್ ಕುಮಾರ್  ಸೇರಿದಂತೆ ಅವರ ಸಹೋಜದ್ಯೋಗಿಗಳು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದರು.

ಪ್ರಮೋದ್ ಕುಮಾರ್ ತಮ್ಮ ಸಹೋದ್ಯೋಗಿಗಳಿಗೆ ಪೊಸಿಷನ್ ತೆಗೆದುಕೊಳ್ಳುವಂತೆ ಹೇಳಿ ಪ್ರತಿದಾಳಿಗೆ ಸಿದ್ಧರಾದರು. ಈ ವೇಳೆ ಉಗ್ರರ ಮೇಲೆ ಪ್ರಮೋದ್ ಕುಮಾರ್ ಗುಂಡಿನ ದಾಳಿ  ನಡೆಸುತ್ತಿದ್ದಂತೆಯೇ ಉಗ್ರರು ಸಿಡಿಸಿದ ಒಂದು ಬುಲೆಟ್ ಅವರ ದೇಹ ಹೊಕ್ಕಿತು. ಇದಕ್ಕೆ ತಲೆ ಕೆಡಿಸಿಕೊಳ್ಳದ ಪ್ರಮೋದ್ ಕುಮಾರ್ ಮತ್ತೆ ದಾಳಿಯಲ್ಲಿ ನಿರತರಾದರು. ಆದರೆ ಇದಾದ ಕೆಲವೇ  ಸೆಕೆಂಡ್ ಗಳಲ್ಲಿ ಮತ್ತೊಂದು ಬುಲೆಟ್ ಅವರ ತಲೆ ಹೊಕ್ಕಿತ್ತು. ಇದರಿಂದ ಪ್ರಮೋದ್ ಕುಮಾರ್ ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಸೇನಾಸ್ಪತ್ರೆಗೆ  ದಾಖಲಿಸಲಾಯಿತಾದರೂ, ದುರಾದೃಷ್ಟವಶಾತ್ ಅವರ ಹುತಾತ್ಮರಾದರು ಎಂದು ಹೇಳಿದ್ದಾರೆ.

ಇದೇ ವೇಳೆ ಸೈನಿಕರಿಗೆ ಬುಲೆಟ್ ಪ್ರೂಫ್ ಹೆಲ್ಮೆಟ್ ನೀಡಬೇಕು ಎಂದು ಆಗ್ರಹಿಸಿದ ಚೌದರಿ ಅವರು, ನಮಗೆ ಯಾವುದೇ ರೀತಿಯ ಬುಲೆಟ್ ಪ್ರೂಫ್ ಹೆಲ್ಮೆಟ್ ಗಳಿಲ್ಲ. ಸಿಆರ್ ಪಿಎಫ್  ಸಿಬ್ಬಂದಿಗಳಿಗೆ ಕೋಮುಘರ್ಷಣೆಯಿಂದ ರಕ್ಷಿಸಿಕೊಳ್ಳುವ ಉಕ್ಕಿನ ಹೆಲ್ಮೆಟ್ ಗಳಿವೆ. ಆದರೆ ಬುಲೆಟ್ ಪ್ರೂಫ್ ಜಾಕೆಟ್ ಗಳಿಲ್ಲ. ಬಹುಶಃ ಬುಲೆಟ್ ಪ್ರೂಫ್ ಹೆಲ್ಮೆಟ್ ಇದ್ದಿದ್ದರೆ ಪ್ರಮೋದ್ ಕುಮಾರ್  ಜೀವಂತವಾಗಿರುತ್ತಿದ್ದರು ಎಂದು ಚೌದರಿ ನೋವಿನಿಂದ ಹೇಳಿದ್ದಾರೆ.

1998 ಜನವರಿ 1ರಂದು ಸಿಆರ್ ಪಿಎಫ್ ಸೇರಿದ್ದ ಯೋಧ ಪ್ರಮೋದ್ ಕುಮಾರ್ ಗೆ ಕಳೆದ ಜುಲೈ 12ರಂದು ಕಮಾಂಡೆಂಟ್ ಆಗಿ ಭಡ್ತಿ ನೀಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.