ದೇಶ

ಮೊದಲ ಪತ್ನಿಯೊಂದಿಗೆ ಸೇರಿ ಎರಡನೇ ಪತ್ನಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸ್ ಮಹಾಶಯ

ಪೊಲೀಸ್ ಮಹಾಶಯನೊಬ್ಬ ತನ್ನ ಮೊದಲ ಪತ್ನಿಯೊಂದಿಗೆ ಸೇರಿ ಎರಡನೇ ಪತ್ನಿಯನ್ನು ಸಾರ್ವಜನಿಕವಾಗಿ ಥಳಿಸಿದ ಅಮಾನವೀಯ ಘಟನೆ...

ಮೊದಲ ಪತ್ನಿಯೊಂದಿಗೆ ಸೇರಿ ಎರಡನೇ ಪತ್ನಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸ್ ಮಹಾಶಯ
ಪತ್ನಿ ಥಳಿಸಿದ ಪೊಲೀಸ್
Published On :
ಮೊರದಾಬಾದ್: ಪೊಲೀಸ್ ಮಹಾಶಯನೊಬ್ಬ ತನ್ನ ಮೊದಲ ಪತ್ನಿಯೊಂದಿಗೆ ಸೇರಿ ಎರಡನೇ ಪತ್ನಿಯನ್ನು ಸಾರ್ವಜನಿಕವಾಗಿ ಥಳಿಸಿದ ಅಮಾನವೀಯ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ. 
ಸಂಚಾರಿ ವಿಭಾಗದಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸತೀಶ್ ಎಂಬಾತ ಎರಡು ಮದುವೆಯಾಗಿದ್ದಾನೆ. ಇತ ಮೊದಲ ಪತ್ನಿಯೊಂದಿಗೆ ಸೇರಿ ಎರಡನೇ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ಜನರು ಸೇರಿದ್ದರು ಇದನ್ನು ತಡೆಯದೆ ಹಲ್ಲೆಯ ದೃಶ್ಯಾವಳಿಗಳನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆಯಿಡಿಯುವಲ್ಲಿ ನಿರತರಾಗಿದ್ದಾರೆ. 
ಈ ಘಟನೆಯ ಬಳಿಕ ಸಂತ್ರಸ್ತೆಯು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಪತಿ ಮೊದಲ ಪತ್ನಿಯ ಮಾತನ್ನು ಕೇಳಿ ಕುಡಿದು ಬಂದು ತನಗೆ ಪ್ರತಿನಿತ್ಯ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾಳೆ. ಈ ದೂರಿನನ್ವಯ ಪೊಲೀಸರು ಸತೀಶ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈಕೆಗೆ ಇಬ್ಬರು ಮಕ್ಕಳಿರುವುದಾಗಿ ತಿಳಿದುಬಂದಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.