ದೇಶ

ಮಹದ್ ಸೇತುವೆ ಕುಸಿತ: ನದಿಯಲ್ಲಿ ಮುಳುಗಿದ್ದ ಎಸ್ ಯುವಿ ಅವಶೇಷ ಪತ್ತೆ

11 ನೇ ದಿನದ ಶೋಧ ಕಾರ್ಯಾಚರಣೆಯಲ್ಲಿ ಮಹದ್ ನ ಸಾವಿತ್ರಿ ನದಿಯ ಸೇತುವೆ ಕುಸಿದ ಪರಿಣಾಮ ಮುಳುಗಿ ಹೋಗಿದ್ದ ಎಸ್ ಯುವಿ ಹಾಗೂ ಎರಡು ಮೃತ ದೇಹಗಳು ಪತ್ತೆಯಾಗಿವೆ.

ಮಹದ್ ಸೇತುವೆ ಕುಸಿತ: ನದಿಯಲ್ಲಿ ಮುಳುಗಿದ್ದ ಎಸ್ ಯುವಿ ಅವಶೇಷ ಪತ್ತೆ
ಮಹದ್ ಸೇತುವೆ ಕುಸಿತ
Published On :

ಮುಂಬೈ: 11 ನೇ ದಿನದ ಶೋಧ ಕಾರ್ಯಾಚರಣೆಯಲ್ಲಿ ಮಹದ್ ನ ಸಾವಿತ್ರಿ ನದಿಯ ಸೇತುವೆ ಕುಸಿದ ಪರಿಣಾಮ ಮುಳುಗಿ ಹೋಗಿದ್ದ ಎಸ್ ಯುವಿ ಹಾಗೂ ಎರಡು ಮೃತ ದೇಹಗಳು ಪತ್ತೆಯಾಗಿವೆ.

ಆಗಸ್ಟ್.2 ರಂದು ಸಾವಿತ್ರಿ ನದಿಯ ಸೇತುವೆ ಕುಸಿದು ಬಿದ್ದ ಪರಿಣಾಮ ಒಂದು ಬಸ್ ಹಾಗೂ ಎಸ್ ಯುವಿ ನೀರಿನಲ್ಲಿ ಮುಳುಗಿತ್ತು. ಆಗಸ್ಟ್ 11 ರಂದು ಬಸ್ ಪತ್ತೆಯಾಗಿತ್ತು. ಈ ಬೆನ್ನಲ್ಲೇ ಎಸ್ ಯುವಿ ಸಹ ಪತ್ತೆಯಾಗಿದ್ದು ಇಬ್ಬರ ಶವವೂ ಪತ್ತೆಯಾಗಿದೆ. ಪತ್ತೆಯಾಗಿರುವ ಎಸ್ ಯು ವಿ ಹಾಗೂ ಶವಗಳನ್ನು ಮೇಲೆತ್ತುವ ಪ್ರಯತ್ನ ನಡೆಯುತ್ತಿದ್ದು, ರಾಜ್ಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ.

ಈ ಬಗ್ಗೆ ರಕ್ಷಣಾ ಇಲಾಖೆಯ ಪಿಆರ್ ಒ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಭಗ್ನಾವಶೇಷಗಳನ್ನು ಶೀಘ್ರವೇ ಹೊರತೆಗೆಯಲಾಗುತ್ತದೆ ಎಂದು ಹೇಳಿದ್ದಾರೆ. ಎಸ್ ಯುವಿ ಯಾ ಭಗ್ನಾವಶೇಷಗಳು ಕುಸಿದ ಸೇತುವೆಯಿಂದ 300 ಮೀಟರ್ ಗಳಷ್ಟು ದೂರದಲ್ಲಿ ಪತ್ತೆಯಾಗಿದ್ದು ನದಿಯಲ್ಲಿ 4-5 ಮೀಟರ್ ಆಳದಲ್ಲಿ ಪತ್ತೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.