ದೇಶ

ಸೆಲ್ಫಿ ಕ್ರೇಜ್ ಗೆ ಬಲಿಯಾಗಿ 8 ಲಕ್ಷ ಕಳೆದುಕೊಂಡಳು!

ಸೆಲ್ಫಿ ಕ್ರೇಜ್ ಗೆ ಬಲಿಯಾಗಿ ಮನುಷ್ಯಾ ಏನೆಲ್ಲಾ ಅವಾಂತರ ಮಾಡಿಕೊಳ್ಳುತ್ತಾನೆ ಎಂಬುದಕ್ಕೆ ಇಲ್ಲೊಂದ ಹೊಸ ನಿದರ್ಶನವಿದ್ದು, ಮಹಿಳೆಯೊಬ್ಬಳು ತನ್ನ ಸೆಲ್ಫಿ ಕ್ರೇಜ್ ನಿಂದಾಗಿ ಬರೊಬ್ಬರಿ 8 ಲಕ್ಷ ರುಪಾಯಿ ಕಳೆದುಕೊಂಡಿದ್ದಾಳೆ.

ಸೆಲ್ಫಿ ಕ್ರೇಜ್ ಗೆ ಬಲಿಯಾಗಿ 8 ಲಕ್ಷ ಕಳೆದುಕೊಂಡಳು!
ಮದುವೆಯಲ್ಲಿ ಸೆಲ್ಫಿ ಕ್ರೇಜ್ (ಸಾಂದರ್ಭಿಕ ಚಿತ್ರ)
Published On :

ಚಂಡೀಗಢ: ಸೆಲ್ಫಿ ಕ್ರೇಜ್ ಗೆ ಬಲಿಯಾಗಿ ಮನುಷ್ಯಾ ಏನೆಲ್ಲಾ ಅವಾಂತರ ಮಾಡಿಕೊಳ್ಳುತ್ತಾನೆ ಎಂಬುದಕ್ಕೆ ಇಲ್ಲೊಂದ ಹೊಸ ನಿದರ್ಶನವಿದ್ದು, ಮಹಿಳೆಯೊಬ್ಬಳು ತನ್ನ ಸೆಲ್ಫಿ ಕ್ರೇಜ್ ನಿಂದಾಗಿ  ಬರೊಬ್ಬರಿ 8 ಲಕ್ಷ ರುಪಾಯಿ ಕಳೆದುಕೊಂಡಿದ್ದಾಳೆ.

ಹೌದು.. ಚಂಡೀಗಢದ ಮಹಿಳೆಯೊಬ್ಬಳು ತನ್ನ ಸಹೋದರಿ ಮದುವೆಯಲ್ಲಿದ್ದಾಗ ಮದುಮಗಳೊಂದಿಗೆ ಸೆಲ್ಫೆ ತೆಗೆದುಕೊಳ್ಳುವ ಭರದಲ್ಲಿ ಸುಮಾರು 8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು  ಕಳೆದುಕೊಂಡಿದ್ದಾಳೆ. ಚಂಡೀಗಢದ ಮೋಹಿನಿ ರೆಸಾರ್ಟ್ ನಲ್ಲಿ ಆಯೋಜಿಸಲಾಗಿದ್ದ ಸಹೋದರಿ ಮದುವೆಯಲ್ಲಿ ಪಾಲ್ಗೊಂಡಿದ್ದ ನೀಲಂ ಎಂಬಾಕೆಯೇ ಆಭರಣ ಕಳೆದುಕೊಂಡ  ನತದೃಷ್ಟೆಯಾಗಿದ್ದಾಳೆ.

ಮೂಲತಃ ಚಂಡೀಗಢದ ಭಮಿಯಾನ್ ಮೂಲದವರಾದ ನೀಲಂ ತಮ್ಮ ಸಹೋದರಿ ಮದುವೆಗಾಗಿ ಮೋಹಿನಿ ರೆಸಾರ್ಟ್ ಗೆ ಆಗಮಿಸಿದ್ದರು. ಮದುವೆ ಸಮಾರಂಭದಲ್ಲಿ ಸಂಬಂಧಿಕರೆಲ್ಲರೂ  ಮೋಜುಮಸ್ತಿಯಲ್ಲಿ ತೊಡಗಿದ್ದರು. ಈ ವೇಳೆ ನೀಲಂ ಕೂಡ ತನ್ನ ಸಂಬಂಧಿಕರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಅವರ ಕೈಯಲ್ಲಿದ್ದ ಬ್ಯಾಗ್ ನಲ್ಲಿ ಸುಮಾರು 8 ಲಕ್ಷ ಮೌಲ್ಯದ  ಚಿನ್ನಾಭರಣ ಹಾಗೂ ನಗದು ಇತ್ತು. ಈ ವೇಳೆ ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ನೀಲಂ ಅವರು ತಮ್ಮ ಫೋನ್ ತೆಗೆದುಕೊಂಡು ಕೈಯಲ್ಲಿದ್ದ ಬ್ಯಾಗ್ ಅನ್ನು ಪಕ್ಕದ್ದಲಿದ್ದ ಪುಟ್ಟ ಬಾಲಕನಿಗೆ  ನೀಡಿದ್ದಾಳೆ. ಅತ್ತ ಈಕೆ ಸೆಲ್ಫಿಯಲ್ಲಿ ಬಿಝಿಯಾಗಿದ್ದರೆ ಇತ್ತ ಚಾಲಾಕಿ ಬಾಲಕ ಬ್ಯಾಗ್ ನೊಂದಿಗೆ ಪರಾರಿಯಾಗಿದ್ದಾನೆ. ಬ್ಯಾಗ್ ನಲ್ಲಿ ಸುಮಾರು 8 ಲಕ್ಷ ಮೌಲ್ಯದ ಬೆಲೆಬಾಳುವ ಆಭರಣಗಳು ಮತ್ತು  ನಗದು ಇತ್ತಂತೆ. ಬಳಿಕ ಎಚ್ಚೆತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರಸ್ತುತ ದೂರು ದಾಖಲಿಸಿಕೊಂಡಿರುವ ಪೊಲೀಸರು ಮೋಹಿನಿ ರೆಸಾರ್ಟ್ ನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದು, ವಿಡಿಯೋದಲ್ಲಿ ಬ್ಯಾಗ್ ನೊಂದಿಗೆ ಬಾಲಕ ಪರಾರಿಯಾಗಿರುವುದು  ದಾಖಲಾಗಿದೆ. ಹೀಗಾಗಿ ಬಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.