ಒಬ್ಬಂಟಿಯಾಗಿ ಹನಿಮೂನ್ ಗೆ ತೆರಳಿದ ಪತಿ: ಪತ್ನಿ ಕಳುಹಿಸುವ ಭರವಸೆ ನೀಡಿದ ಸುಷ್ಮಾ
ಹನಿಮೂನ್ ಗೆ ಹೊರಟ ಪೌಜಾನ್ ವಿಮಾನ ಪ್ರಯಾಣದ ವೇಳೆ ಪಕ್ಕದ ಖಾಲಿ ಸೀಟಿನಲ್ಲಿ ಪತ್ನಿಯ ಫೋಟೋ ಇಟ್ಟು 'ನೋಡಿ ನಾನೀಗ ಪತ್ನಿಯೊಂದಿಗೆ ಪ್ರಯಾಣ ಮಾಡುತ್ತಿದ್ದೇನೆ' ..

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸುಷ್ಮಾ ಸ್ವರಾಜ್ ಅವರು ಅವಶ್ಯಕತೆಯಿರುವವರಿಗೆ ಸಹಾಯ ಮಾಡಿ ಪ್ರಧಾನಿ ಮೋದಿ ಅವರ ಸಂಪುಟದ ಕ್ರಿಯಾಶೀಲ ಸಚಿವೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಜೊತೆಗೆ ಭಾರತೀಯರಿಗೆ ಎಲ್ಲಾ ಕಾಲದಲ್ಲೂ ನೆರವು ಒದಗಿಸುವ ಭರವಸೆ ನೀಡಿದ್ದಾರೆ.
ಪೈಜಾನ್ ಪಟೇಲ್ ಎಂಬಾತ ಪತ್ನಿಯೊಂದಿಗೆ ಹನಿಮೂನ್‌ಗೆ ತೆರಳುವುದಕ್ಕೆ ಎಲ್ಲಾ ಸಿದ್ಧತೆ ನಡೆಸಿದ್ದ. ಆದರೆ ಕೊನೆಕ್ಷಣದಲ್ಲಿ ಪತ್ನಿ ಸನಾ ಪಾಸ್‌ಪೋರ್ಟ್ ಕಳೆದು ಹೋಗಿತ್ತು. ಆದರೆ ಫೈಜಲ್ ಮಾತ್ರ ಪತ್ನಿಯನ್ನು ಬಿಟ್ಟು ಒಬ್ಬನೇ ಯುರೋಪ್‌ಗೆ ಹನಿಮೂನ್‌ಗೆ ತೆರಳಿದ್ದಾನೆ.
ಹನಿಮೂನ್ ಗೆ ಹೊರಟ ಪೈಜಾನ್ ವಿಮಾನ ಪ್ರಯಾಣದ ವೇಳೆ ಪಕ್ಕದ ಖಾಲಿ ಸೀಟಿನಲ್ಲಿ ಪತ್ನಿಯ ಫೋಟೋ ಇಟ್ಟು 'ನೋಡಿ ನಾನೀಗ ಪತ್ನಿಯೊಂದಿಗೆ ಪ್ರಯಾಣ ಮಾಡುತ್ತಿದ್ದೇನೆ' ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ಸಹಾಯ ಕೋರಿದ್ದಾನೆ.
ಟ್ವೀಟ್ ನೋಡುತ್ತಿದ್ದಂತೆ ಸುಷ್ಮಾ ಸ್ವರಾಜ್ ಅವರು ಸ್ಪಂದಿಸಿದ್ದು ಪತ್ನಿಗೆ ಡ್ಯುಪ್ಲಿಕೇಟ್ ಪಾಸ್‌ಪೋರ್ಟ್ ನೀಡಿ ವಿದೇಶಕ್ಕೆ ಕಳುಹಿಸುವ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


