ಕಾಶ್ಮೀರ ಬಗ್ಗೆ ಮಾತನಾಡಲು ಆತನಿಗೆ ಅಧಿಕಾರ ಕೊಟ್ಟವರಾರು?: ವೆಂಕಯ್ಯ ನಾಯ್ಡು
ಭಾರತದ ಮೇಲೆ ಪಾಕಿಸ್ತಾನ ಪರಮಾಣು ಯುದ್ಧ ಮಾಡಬಹುದು ಎಂದು ಹಿಜ್ ಬುಲ್ ಮುಜಾಹಿದ್ದೀನ್ ಮುಖಂಡ ಸೈಯದ್ ...

Published On :
ನವದೆಹಲಿ: ಭಾರತದ ಮೇಲೆ ಪಾಕಿಸ್ತಾನ ಪರಮಾಣು ಯುದ್ಧ ಮಾಡಬಹುದು ಎಂದು ಹಿಜ್ ಬುಲ್ ಮುಜಾಹಿದ್ದೀನ್ ಮುಖಂಡ ಸೈಯದ್ ಸಲಹುದ್ದೀನ್ ಬೆದರಿಕೆ ಹಾಕಿರುವುದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು, ಪ್ರಚಾರ ಪಡೆಯಲು ಇಂತಹ ಹೇಳಿಕೆ ನೀಡುತ್ತಾರೆ. ಹೀಗೆ ಹೇಳಿಕೆ ನೀಡುವ ಜನರಿಗೆ ಪ್ರೋತ್ಸಾಹ ನೀಡಬೇಕೆ ಎಂಬುದನ್ನು ಗಂಭೀರವಾಗಿ ವಿಚಾರಮಾಡಿ ಎಂದು ಪಾಕಿಸ್ತಾನಕ್ಕೆ ಅವರು ಸೂಚಿಸಿದ್ದಾರೆ.
ಅವರು ಪ್ರಚಾರಕ್ಕಾಗಿ ಕೆಟ್ಟದಾಗಿ ಮಾತನಾಡುತ್ತಿರುತ್ತಾರೆ. ಯಾರವನು, ಕಾಶ್ಮೀರದ ಬಗ್ಗೆ ಮಾತನಾಡಲು ಆತನಿಗೆ ಅಧಿಕಾರ ಕೊಟ್ಟವರಾರು? ಇಂತಹ ವಿಷಯಗಳಿಗೆ ಪ್ರಚಾರ ನೀಡುವುದು ಸರಿಯೇ? ಇಂತಹ ಜನರಿಗೆ ಪ್ರೋತ್ಸಾಹ ನೀಡುವುದು ಸರಿಯೆ ಎಂಬುದನ್ನು ಪಾಕಿಸ್ತಾನ ಯೋಚಿಸಬೇಕು. ಬೆದರಿಕೆಯಿಂದ ಏನು ಮಾಡಲೂ ಸಾಧ್ಯವಿಲ್ಲ ಎಂದು ವೆಂಕಯ್ಯ ನಾಯ್ಡು ಮಾಧ್ಯಮಗಳ ಮುಂದೆ ಖಾರವಾಗಿ ಪ್ರತಿಕ್ರಿಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


