ದೇಶ

ಸತತ 31 ನೇ ದಿನವೂ ಕಾಶ್ಮೀರದಲ್ಲಿ ಕರ್ಫ್ಯೂ ಮುಂದುವರಿಕೆ

ಕಾಶ್ಮೀರದಲ್ಲಿ ಗಲಭೆ ಪರಿಸ್ಥಿತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಸತತ 31 ನೇ ದಿನವೂ ಮುಂದುವರೆದಿದೆ.

ಸತತ 31 ನೇ ದಿನವೂ ಕಾಶ್ಮೀರದಲ್ಲಿ ಕರ್ಫ್ಯೂ ಮುಂದುವರಿಕೆ
ಕಾಶ್ಮೀರದಲ್ಲಿ ಕರ್ಫ್ಯೂ( ಸಂಗ್ರಹ ಚಿತ್ರ)
Published On :

ಶ್ರೀನಗರ: ಕಾಶ್ಮೀರದಲ್ಲಿ ಗಲಭೆ ಪರಿಸ್ಥಿತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಸತತ 31 ನೇ ದಿನವೂ ಮುಂದುವರೆದಿದೆ.

ಅನಂತ್ ನಾಗ್, ಕುಲ್ಗಾಮ್, ಶೋಪಿಯಾನ್, ಪುಲ್ವಾಮದಲ್ಲಿ ಕರ್ಫ್ಯೂ ಮುಂದುವರೆದಿದ್ದು, ಶ್ರೀನಗರ, ಉತ್ತರ ಕಾಶ್ಮೀರದ ಶೋಪೋರೆ, ಬಾರಾಮುಲ್ಲಾ, ಹಂದ್ವಾರಾ ಹಾಗು ಕುಪ್ವಾರಗಳಲ್ಲಿ ನಿರ್ಬಂಧ ಜಾರಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಶ್ಮೀರದಲ್ಲಿ ಗಲಭೆ ಉಂಟಾಗಿರುವುದರಿಂದ ತಾವು ಮಾಧ್ಯಮದವರೊಂದಿಗೆ ಮಾತನಾಡಲು ನಿರ್ಬಂಧವಿದೆ ಎಂದು ಇದೆ ಮೊದಲ ಬಾರಿಗೆ ಕಾಶ್ಮೀರದ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಮಾಧ್ಯಮಗಳೊಂದಿಗೆ ನೇರವಾಗಿ ಮಾತನಾಡುವುದಕ್ಕೆ ನಿರ್ಬಂಧವಿದೆ. ಹೆಚ್ಚಿನ ಮಾಹಿತಿಯನ್ನು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗುವುದು ಎಂದು ಶ್ರೀನಗರದ ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಗ್ರ ಬುರ್ಹಾನ್ ವಾಣಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿರುವುದನ್ನು ಖಂಡಿಸಿ ಪ್ರತ್ಯೇಕತಾವಾದಿಗಳು ರಸ್ತೆ ತಡೆ ನಡೆಸಿದ್ದು, ಬಂದ್ ಗೆ ಕರೆ ನೀಡಿದ್ದಾರೆ. ಪರಿಣಾಮ ಕಳೆದ ಒಂದು ತಿಂಗಳಿನಿಂದ ಶಾಲಾ ಕಾಲೇಜುಗಳು, ಉದ್ದಿಮೆಗಳು, ಸಾರಿಗೆ ವ್ಯವಸ್ಥೆ ಬಂದ್ ಆಗಿದೆ. ಕಾಶ್ಮೀರದಲ್ಲಿ ಉಂಟಾಗಿರುವ ಗಲಭೆ ಪರಿಣಾಮ ಈ ವರೆಗೂ 55 ಜನರು ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.