ದೇಶ

ನೆರೆ ರಾಷ್ಟ್ರ ಪಾಕಿಸ್ತಾನ ಪಾಠ ಕಲಿಯುವುದಿಲ್ಲ: ರಾಜನಾಥ್ ಸಿಂಗ್

ಸಂಸತ್ ನಲ್ಲಿ ತಮ್ಮ ಪಾಕಿಸ್ತಾನ ಪ್ರವಾಸದ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ತಮಗೆ ಪಾಕಿಸ್ತಾನದಲ್ಲಿ ದೊರೆತ ಪ್ರತಿಕ್ರಿಯೆ ಬಗ್ಗೆ ಅಸಮಾಧಾನ...

ನೆರೆ ರಾಷ್ಟ್ರ ಪಾಕಿಸ್ತಾನ ಪಾಠ ಕಲಿಯುವುದಿಲ್ಲ: ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Published On :

ನವದೆಹಲಿ: ಸಂಸತ್ ನಲ್ಲಿ ತಮ್ಮ ಪಾಕಿಸ್ತಾನ ಪ್ರವಾಸದ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ತಮಗೆ ಪಾಕಿಸ್ತಾನದಲ್ಲಿ ದೊರೆತ ಪ್ರತಿಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಪಾಕಿಸ್ತಾನ ಪಾಠ ಕಲಿಯುವುದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬೆಳೆಸಲು ಭಾರತದ ಎಲ್ಲಾ ಪ್ರಧಾನಿಗಳೂ ಶ್ರಮಿಸಿದ್ದಾರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಪಾಕಿಸ್ತಾನ ಮಾತ್ರ ಪಾಠ ಕಲಿಯುವುದಿಲ್ಲ ಎಂದು ರಾಜನಾಥ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಸ್ನೇಹಿತರನ್ನು ನಾವು ಬದಲಿಸಬಹುದು. ಆದರೆ ನೆರೆಯವರನ್ನಲ್ಲ. ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದೊಂದಿಗೆ ಸ್ನೇಹಯುತವಾಗಿಯೇ ಇದ್ದಾರೆ ಆದರೆ ಪಾಕಿಸ್ತಾನ ಮಾತ್ರ ಪಾಠ ಕಲಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಸಾರ್ಕ್ ಸಭೆಯಲ್ಲಿ ಪಾಲ್ಗೊಳ್ಳಲು ಇಸ್ಲಾಮಾಬಾದ್ ಗೆ ತೆರಳಿದ್ದ ರಾಜನಾಥ್ ಸಿಂಗ್ ಅವರನ್ನು ಸ್ವಾಗತಿಸುವ ವೇಳೆ ಪಾಕಿಸ್ತಾನ ಶಿಷ್ಟಾಚಾರ ಪಾಲಿಸದೆ ಇದ್ದ ಪಾಕಿಸ್ತಾನದ ನಡೆಯನ್ನು ಜೆಡಿಯು ನಾಯಕ ಶರದ್ ಯಾದವ್ ಖಂಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.