ದೇಶ

ಕಾಶ್ಮೀರದ ವಿಷಯದಲ್ಲಿ ಕೇಂದ್ರದ ಕಾರ್ಯತಂತ್ರ ಸರಿ ಇಲ್ಲ: ಬಿಜೆಪಿ ಸಂಸದ ಆರ್ ಕೆ ಸಿಂಗ್

ಕೇಂದ್ರ ಸರ್ಕಾರ ಕಾಶ್ಮೀರ ವಿಷಯವನ್ನು ನಿರ್ವಹಿಸುತ್ತಿರುವ ರೀತಿಗೆ ಬಿಜೆಪಿ ಸಂಸದನಿಂದಲೇ ಅಪಸ್ವರ ಕೇಳಿಬಂದಿದೆ.

ಕಾಶ್ಮೀರದ ವಿಷಯದಲ್ಲಿ ಕೇಂದ್ರದ ಕಾರ್ಯತಂತ್ರ ಸರಿ ಇಲ್ಲ: ಬಿಜೆಪಿ ಸಂಸದ ಆರ್ ಕೆ ಸಿಂಗ್
ಬಿಜೆಪಿ ಸಂಸದ ಆರ್ ಕೆ ಸಿಂಗ್
Published On :

ನವದೆಹಲಿ: ಕೇಂದ್ರ ಸರ್ಕಾರ ಕಾಶ್ಮೀರ ವಿಷಯವನ್ನು ನಿರ್ವಹಿಸುತ್ತಿರುವ ರೀತಿಗೆ ಬಿಜೆಪಿ ಸಂಸದನಿಂದಲೇ ಅಪಸ್ವರ ಕೇಳಿಬಂದಿದೆ.

ಬಿಜೆಪಿ ಸಂಸದರಾಗಿರುವ, ಮಾಜಿ ಗೃಹ ಕಾರ್ಯದರ್ಶಿಯೂ ಆಗಿರುವ ಆರ್ ಕೆ ಸಿಂಗ್, ಜಮ್ಮು-ಕಾಶ್ಮೀರದ ಬಗ್ಗೆ ಸಂಸತ್ ನಲ್ಲಿ ಮಾತನಾಡಿದ್ದು, " ಇತ್ತೀಚಿಗೆ ನಡೆದ ಬಾಂಬ್ ದಾಳಿಯಲ್ಲಿ ಜಮ್ಮು-ಕಾಶ್ಮೀರದ ಓರ್ವ ಸಚಿವನನ್ನು ಟಾರ್ಗೆಟ್ ಮಾಡಲಾಗಿತ್ತು ಹಾಗು ಕೆಲವು ಪೊಲಿಸ್ ಠಾಣೆಗಳನ್ನು ಹಾಗೂ ಔಟ್ ಪೋಸ್ಟ್ ಗಳನ್ನೂ ಪೊಲಿಸ್ ಅಧಿಕಾರಿಗಳು ತೆರವುಗೊಳಿಸಿದ್ದರು. ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ವಿಷಯದಲ್ಲಿ ನಡೆಸುತ್ತಿರುವ ಕಾರ್ಯತಂತ್ರ ಸಂಪೂರ್ಣವಾಗಿ ತಪ್ಪು ಎಂದು ಆರ್ ಕೆ ಸಿಂಗ್ ಅಭಿಪ್ರಾಯಾಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರನ್ನು ನಿರ್ವಹಿಸುತ್ತಿರುವ ರೀತಿ ಸರಿ ಇಲ್ಲ, ಕಾಶ್ಮೀರದ ಬಹು ಸಂಖ್ಯಾತರಿಗೆ ಶಾಂತಿ ಹಾಗೂ ಸೌಹಾರ್ದತೆ ಬೇಕೆಂಬ ಭಾವನೆ ಇದೆ. ಆದರೆ ಒಂದಷ್ಟು ಭಯೋತ್ಪಾದಕರು ಅವರಲ್ಲಿ ಭಯ ಮೂಡಿಸಿದ್ದಾರೆ ಎಂದು ಆರ್ ಕೆ ಸಿಂಗ್ ತಿಳಿಸಿದ್ದಾರೆ. ಕಾಶ್ಮೀರಿ ಪ್ರತ್ಯೇಕತಾವಾದಿಗಳ ವಿರುದ್ಧ ಕೇಂದ್ರ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಹಾಗೆಯೇ ಹವಾಲಾ ಹಣದ ಹರಿವನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.