ಉತ್ತರಾಖಂಡ್ ನಲ್ಲಿ ಕಾಡ್ಗಿಚ್ಚು: ಬೆಂಕಿ ನಂದಿಸಲು ಎನ್ ಡಿ ಆರ್ ಎಫ್ ತಂಡ ಹರಸಾಹಸ
ಉತ್ತರಾಖಂಡದ 13 ಜಿಲ್ಲೆಗಳಲ್ಲಿ 1900 ಹೆಕ್ಟೇರ್ಗೂ ಹೆಚ್ಚಿನ ಕಾಡನ್ನು ಆಹುತಿ ತೆಗೆದುಕೊಂಡಿರುವ ಕಾಡ್ಗಿಚ್ಚನ್ನು ನಿಯಂತ್ರಿಲು 3 ಎನ್ಡಿಆರ್ಎಫ್...

ಡೆಹರಾಡೂನ್: ಉತ್ತರಾಖಂಡದ 13 ಜಿಲ್ಲೆಗಳಲ್ಲಿ 1900 ಹೆಕ್ಟೇರ್ಗೂ ಹೆಚ್ಚಿನ ಕಾಡನ್ನು ಆಹುತಿ ತೆಗೆದುಕೊಂಡಿರುವ ಕಾಡ್ಗಿಚ್ಚನ್ನು ನಿಯಂತ್ರಿಲು 3 ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ.
ಬೆಂಕಿಯನ್ನು ನಿಯಂತ್ರಣಕ್ಕೆ ತರಲು 135 ತಜ್ಞರ ತಂಡ ಹರಸಾಹಸ ಪಡುತ್ತಿದೆ. ಎನ್ಡಿಆರ್ಎಫ್ ತಂಡ ನೀರಿನ ಟ್ಯಾಂಕರ್ಗಳು, ಪಂಪ್ಗಳು ಮತ್ತು ಅಗತ್ಯ ಔಷಧಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದೆ.
ಎನ್ಡಿಆರ್ಎಫ್ ತಂಡ ಅಲ್ಮೋರಾ, ಪೌರಿ, ಗಾಚರ್ನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಎನ್ಡಿಆರ್ಎಫ್ನ ಮಹಾನಿರ್ದೇಶಕ ಓಪಿ ಸಿಂಗ್ ತಿಳಿಸಿದ್ದಾರೆ. ಶುಷ್ಕ ವಾತಾವರಣ, ಹೆಚ್ಚಾದ ತಾಪಮಾನ ಮತ್ತು ಅತಿಯಾದ ಗಾಳಿಯಿಂದಾಗಿ ಬೆಂಕಿ ಹತೋಟಿ ಮೀರಿ ಹಬ್ಬುತ್ತಿದೆ. ಜತೆಗೆ ಕಾರ್ಯಾಚರಣೆ ನಡೆಸಲು ಕಷ್ಟವಾಗುತ್ತಿದೆ ಎಂದು ಎನ್ಡಿಆರ್ಎಫ್ ತಂಡ ತಿಳಿಸಿದೆ.
ರಕ್ಷಿತಾರಣ್ಯಗಳಿಗೂ ಬೆಂಕಿ ಹಬ್ಬಿದೆ. ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ನ 198 ಹೆಕ್ಟೇರ್ ಕಾಡು ಬೆಂಕಿಗೆ ನಾಶವಾಗಿದೆ. ಜತೆಗೆ ರಾಜಾಜಿ ಹುಲಿ ಸಂರಕ್ಷಿತ ಅರಣ್ಯದಲ್ಲಿ 70 ಹೆಕ್ಟೇರ್ ಮತ್ತು ಕೇದಾರ್ನಾಥ್ ಮಸ್ಕ್ ಡೀರ್ ಸ್ಯಾಂಚುರಿನಲ್ಲಿ 60 ಹೆಕ್ಟೇರ್ ಅರಣ್ಯ ಕಾಡ್ಗಿಚ್ಚಿಗೆ ಬಲಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


