ನನಗೆ ವಯಸ್ಸು ನೂರು ಆದರು ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆ: ಕರುಣಾನಿಧಿ
ನನಗೆ 100 ವರ್ಷ ವಯಸ್ಸಾದರೂ ನಾನು ಇಲ್ಲಿಗೆ ಬಂದು ನಿಮ್ಮನ್ನು ಭೇಟಿ ಮಾಡಿ ಹೋಗುತ್ತೇನೆ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ...

ವಿಲ್ಲಾಪುರಂ: ನನಗೆ 100 ವರ್ಷ ವಯಸ್ಸಾದರೂ ನಾನು ಇಲ್ಲಿಗೆ ಬಂದು ನಿಮ್ಮನ್ನು ಭೇಟಿ ಮಾಡಿ ಹೋಗುತ್ತೇನೆ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಹೇಳಿದ್ದಾರೆ.
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ 92 ವರ್ಷದ ಕರುಣಾನಿಧಿ ಎಷ್ಟೇ ವಯಸ್ಸಾದರೂ ತಮ್ಮ ಜನಸೇವೆ ನಿಲ್ಲುವುದಿಲ್ಲ, ಅವರಿಗಾಗಿ ಕೆಲಸ ಮಾಡಲು ತಮ್ಮ ಮನಸ್ಸು ಸದಾ ತುಡಿಯುತ್ತಿರುತ್ತದೆ ಎಂದು ಹೇಳಿದರು.
ವಿಲ್ಲಾಪುರಂನ ನಗರಸಭೆ ಮೈದಾನದಲ್ಲಿ ಸುಮಾರು 5 ಸಾವಿರ ಮಂದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸಿಎಂ ಜಯಲಲಿತಾ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರವಾಹದ ವೇಳೆ ಮನುಷ್ಯತ್ವ ಮರೆತ ಸಿಎಂ ಜಯಲಲಿತಾ ಜನ ಸಾಮಾನ್ಯರ ಬಗ್ಗೆ ಕಿಂಚಿತ್ತು ಯೋಚನೇ ಮಾಡಲಿಲ್ಲ. ಹೀಗಾಗಿ ಹಲವರು ತಮ್ಮ ಜೀವನವನ್ನೇ ತ್ಯಜಿಸಬೇಕಾಯಿತು ಎಂದು ಆರೋಪಿಸಿದರು.
ಜನರ ಅಭಿವೃದ್ಧಿಗಾಗಿ ತಮ್ಮ ಮೇಲೆ ಮಹತ್ತರ ಜವಾಬ್ದಾರಿಯಿದೆ, ಯುವಕರ ಮೇಲೆ ಗುರುತರವಾದ ಹೊಣೆಗಾರಿಕೆಯಿದೆ, ಅವರೇ ಈ ದೇಶದ ಭವಿಷ್ಯದ ಪಿಲ್ಲರ್ ಗಳಾಗಿದ್ದಾರೆ ಎಂದರು.
ದೇಶದ ರಕ್ಷಣೆಯಲ್ಲಿ ಮಹಿಳೆಯರು ಹಾಗೂ ಬಡವರ ಕೊಡುಗೆ ಅಪಾರವಿದೆ ಎಂದ ಅವರು, ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


