ದೇಶ

ಹೈದರಾಬಾದ್ ಜಿಲ್ಲಾಡಳಿತ ವೆಬ್ ಸೈಟ್ ನಲ್ಲಿ ಸನ್ನಿ ಲಿಯೋನ್ ಚಿತ್ರ!

ಹೈದರಾಬಾದ್ ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದ್ದು, ವೆಬ್ ಸೈಟ್ ನಲ್ಲಿ ಬಹಳ ಹೊತ್ತ ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಅವರ ಚಿತ್ರ ಪ್ರದರ್ಶನವಾದ ಘಟನೆ ನಡೆದಿದೆ..

ಹೈದರಾಬಾದ್ ಜಿಲ್ಲಾಡಳಿತ ವೆಬ್ ಸೈಟ್ ನಲ್ಲಿ ಸನ್ನಿ ಲಿಯೋನ್ ಚಿತ್ರ!
ಹೈದರಾಬಾದ್ ಸರ್ಕಾರಿ ವೆಬ್ ತಾಣದಲ್ಲಿ ಸನ್ನಿ ಲಿಯೋನ್ ಫೋಟೋ (ಸಂಗ್ರಹ ಚಿತ್ರ)
Published On :

ಹೈದರಾಬಾದ್‌: ಹೈದರಾಬಾದ್ ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದ್ದು, ವೆಬ್ ಸೈಟ್ ನಲ್ಲಿ ಬಹಳ ಹೊತ್ತ ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಅವರ ಚಿತ್ರ ಪ್ರದರ್ಶನವಾದ  ಘಟನೆ ನಡೆದಿದೆ.

ಹೈದರಾಬಾದ್ ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗುವ ಮೂಲಕ ತೆಲಂಗಾಣ ಸರ್ಕಾರವನ್ನು ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದ ಘಟನೆ ನಡೆದಿದ್ದು, ವೆಬ್ ತಾಣದಲ್ಲಿ ಸನ್ನಿ  ಲಿಯೋನ್ ಳ ನಗ್ನ ಚಿತ್ರಗಳು ಕಾಣಿಸಿಕೊಂಡ ಘಟನೆ ನಡೆದಿದೆ. ವೆಬ್‌ಸೈಟಿನಲ್ಲಿ ಮುಖಪುಟದಲ್ಲಿ ಹಾಗೂ ಅದರೊಳಗಿನ ಹಲವಾರು ಲಿಂಕ್‌ ಗಳಲ್ಲಿ ನಟಿ ಸನ್ನಿ ಲಿಯೋನ್‌ ಳ ನಗ್ನ ಚಿತ್ರ  ಕಾಣಿಸಿಕೊಂಡ ವಿಷಯ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡಿತ್ತು.

ವಿಚಾರ ತಿಳಿಯುತ್ತಿದ್ದಂತೆಯೇ ಸನ್ನಿ ಲಿಯೋನ್‌ ಳ ನಗ್ನ ಚಿತ್ರವನ್ನು ವೆಬ್‌ ಸೈಟಿನಿಂದ ತತ್‌ಕ್ಷಣ ತೆಗೆದು ಹಾಕುವ ಗಂಭೀರ ಪ್ರಯತ್ನಗಳನ್ನು ತಂತ್ರಜ್ಞರು ಮಾಡಿದರಾದರೂ ಅದು ಕೂಡಲೇ  ಫ‌ಲಕಾರಿಯಾಗಲಿಲ್ಲ. ಹೀಗಾಗಿ ಬಹಳ ಹೊತ್ತು  ಸನ್ನಿ ಲಿಯೋನ್‌ ನಗ್ನ ಫೋಟೋಗಳು ಮುನ್ಸಿಪಲ್‌ ಕಾರ್ಪೊರೇಶನ್‌ನ ವೆಬ್‌ಸೈಟಿನಲ್ಲಿ ರಾರಾಜಿಸುವಂತಾಗಿತ್ತು. ಈ ಜಾಲ ತಾಣವನ್ನು  ನಗರದಲ್ಲಿನ ಕಸ ಸಂಗ್ರಹಿಸಿ ಸಾಗಿಸುವ ಟ್ರಕ್‌ ಗಳ ಮೇಲೆ ಕಣ್ಗಾವಲು ಇಡುವ ಕೆಲಸಕ್ಕಾಗಿ ಬಳಸಲಾಗುತ್ತಿತ್ತು. ಪ್ರಸ್ತುತ ಹರಸಾಹಸ ಪಟ್ಟು ವೆಬ್ ಸೈಟಿನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಗ್ನ  ಚಿತ್ರಗಳನ್ನು ತಂತ್ರಜ್ಞರು ತೆಗೆದು ಹಾಕಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾಡಳಿತ ಅಧಿಕಾರಿಗಳು, ಜಿಲ್ಲಾಡಳಿತದ ಈ ವೆಬ್ ಸೈಟ್ ಅನ್ನು "ಸೆಂಟರ್‌ ಫಾರ್‌ ಗುಡ್‌ ಗವರ್ನನೆನ್ಸ್‌' ಸಂಸ್ಥೆ ನಿರ್ವಹಣೆ ಮಾಡುತ್ತಿದೆ.  ಹೀಗಾಗಿ ಈ ಪ್ರಕರಣದ ಸಂಪೂರ್ಣ ಹೊಣೆ ಅದರದ್ದೇ ಆಗಿರುತ್ತದೆ. ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.