ದೇಶ

10 ವರ್ಷದ ಬಾಲಕನನ್ನು ಇರಿದು ಹತ್ಯೆ ಮಾಡಿದ ನೆರೆಮನೆಯಾತ

10 ವರ್ಷದ ಬಾಲಕನೊಬ್ಬನ್ನು ಮಾನಸಿಕವಾಗಿ ಅಸ್ವಸ್ಥನಾಗಿದ್ದ ನೆರೆಮನೆಯಾದ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆಯೊಂದು ಮಂಗಳವಾರ ನಡೆದಿದೆ...

10 ವರ್ಷದ ಬಾಲಕನನ್ನು ಇರಿದು ಹತ್ಯೆ ಮಾಡಿದ ನೆರೆಮನೆಯಾತ
ಸಾಂದರ್ಭಿಕ ಚಿತ್ರ
Published On :

ಕೊಚ್ಚಿ: 10 ವರ್ಷದ ಬಾಲಕನೊಬ್ಬನ್ನು ಮಾನಸಿಕವಾಗಿ ಅಸ್ವಸ್ಥನಾಗಿದ್ದ ನೆರೆಮನೆಯಾದ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆಯೊಂದು ಮಂಗಳವಾರ ನಡೆದಿದೆ.

ರಿಸ್ಟಿ (10) ಹತ್ಯೆಯಾದ ಬಾಲಕ. ಅಜಿ ದೇವಾಸಿಯಾ (40) ಹತ್ಯೆ ಮಾಡಿದ ವ್ಯಕ್ತಿ. ಇಂದು ಬೆಳಿಗ್ಗೆ ಹಾಲು ತರುವ ಸಲುವಾಗಿ ಮನೆಯ ಬಳಿಯಿದ್ದ ಅಂಗಡಿಗೆ ಬಾಲಕ ಹೋಗಿದ್ದಾನೆ. ಈ ವೇಳೆ ಹಾಲು ತೆಗೆದುಕೊಂಡು ಬರುತ್ತಿದ್ದ ಬಾಲಕನನ್ನು ನೋಡಿದ್ದ ಅಜಿ ಇದ್ದಕ್ಕಿದ್ದಂತೆ ಬಾಲಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ಬಾಲಕನ ಕುತ್ತಿಗೆ ಅಜಿ 17 ಬಾರಿ ಇರಿದಿದ್ದು, ಬಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ. ಇದರಂತೆ ಕುಟುಂಬಸ್ಥರು ಬಾಲಕನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದಾನೆಂದು ವೈದ್ಯರು ಹೇಳಿದ್ದಾರೆ.

ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಎರ್ನಾಕುಲಂ ಪೊಲೀಸರು, ಹತ್ಯೆ ಮಾಡಿದ ಅಜಿ ದೇವಾಸಿಯಾ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.