ದೇಶ

ನಾನು ಪ್ರಧಾನಿ ಹುದ್ದೆಯ ಹಕ್ಕುದಾರನಲ್ಲ, ಹಣೆಬರಹದಲ್ಲಿದ್ದರೆ ಪ್ರಧಾನಿಯಾಗುವೆ: ನಿತೀಶ್ ಕುಮಾರ್

ನಾನು ಪ್ರಧಾನಿ ಹುದ್ದೆಯ ಹಕ್ಕುದಾರನಲ್ಲ. ಆದರೆ, ಹಣೆಬರಹದಲ್ಲಿದ್ದರೆ ಒಂದು ದಿನ ಪ್ರಧಾನಿಯಾಗುವೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್...

ನಾನು ಪ್ರಧಾನಿ ಹುದ್ದೆಯ ಹಕ್ಕುದಾರನಲ್ಲ, ಹಣೆಬರಹದಲ್ಲಿದ್ದರೆ ಪ್ರಧಾನಿಯಾಗುವೆ: ನಿತೀಶ್ ಕುಮಾರ್
ನಿತೀಶ್ ಕುಮಾರ್
Published On :

ಪಾಟ್ನಾ: ನಾನು ಪ್ರಧಾನಿ ಹುದ್ದೆಯ ಹಕ್ಕುದಾರನಲ್ಲ. ಆದರೆ, ಹಣೆಬರಹದಲ್ಲಿದ್ದರೆ ಒಂದು ದಿನ ಪ್ರಧಾನಿಯಾಗುವೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಪಟ್ನಾದಲ್ಲಿ ಶನಿವಾರ ನಡೆದ ಜೆಡಿಯು ರಾಷ್ಟ್ರೀಯ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಸರಿ ಪಕ್ಷವನ್ನು ಸೋಲಿಸುವುದಕ್ಕಾಗಿ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದಾಗಿ ಜೆಡಿಯು ನೂತನ ಮುಖ್ಯಸ್ಥ  ನಿತೀಶ್‌ ಕುಮಾರ್‌ ಹೇಳಿದರು. ಇದೇ ವೇಳೆ ಜನರಿಗೆ ಒಂದಾಗಲು ಕರೆ ನೀಡುವುದೂ ಅಪರಾಧವೇ ಎಂದು ಪ್ರಶ್ನಿಸಿದರು.

ನಾಯಕತ್ವ ವಿಚಾರವನ್ನು ಕಾಲವೇ ನಿರ್ಧರಿಸಲಿದೆ. ಮೊದಲಿಗೆ ನಾವು ಬಿಜೆಪಿ ವಿರುದ್ಧ ಒಟ್ಟಾಗಬೇಕಿದೆ. ಅದಕ್ಕಾಗಿ ಪ್ರತಿಯೊಬ್ಬರೂ ತ್ಯಾಗ ಮಾಡಬೇಕು. ಒಂದು ವೇಳೆ ನಾನು ಮತ್ತು ಲಾಲು ಪ್ರಸಾದ್‌ ಅವರು ತ್ಯಾಗ ಮಾಡದಿದ್ದರೆ ಮಹಾ ಮೈತ್ರಿಕೂಟ ರೂಪುಗೊಳ್ಳುತ್ತಿರಲಿಲ್ಲ’ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.