ಚೆನ್ನೈನಲ್ಲಿ ಜಗತ್ತಿನ ಎರಡನೇ ಬೃಹತ್ ಅತಿವೇಗದ ರೈಲು ಮಾರ್ಗ ನಿರ್ಮಿಸಲು ಚೀನಾ ಆಸಕ್ತಿ
ಜಗತ್ತಿನಲ್ಲಿ ಎರಡನೇ ಬೃಹತ್ ಅತಿವೇಗದ ರೈಲು ಮಾರ್ಗವನ್ನು ಚೆನ್ನೈನಲ್ಲಿ ನಿರ್ಮಿಸಲು ಚೀನಾ ಆಸಕ್ತಿ ತೋರಿಸಿದೆ ಎಂದು ಸುದ್ದಿ...

Published On :
ನವದೆಹಲಿ: ಜಗತ್ತಿನಲ್ಲಿ ಎರಡನೇ ಬೃಹತ್ ಅತಿವೇಗದ ರೈಲು ಮಾರ್ಗವನ್ನು ಚೆನ್ನೈನಲ್ಲಿ ನಿರ್ಮಿಸಲು ಚೀನಾ ಆಸಕ್ತಿ ತೋರಿಸಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಜಗತ್ತಿನಲ್ಲಿ ಅತೀ ಹೆಚ್ಚು ಉದ್ದದ ಅತಿವೇಗದ ರೈಲು ಮಾರ್ಗ ನಿರ್ಮಿಸಿದ್ದ ಚೀನಾ ರೈಲ್ವೇ ಕಾರ್ಪರೇಷನ್ (ಸಿಆರ್‌ಸಿ) ಹೈ ಸ್ಪೀಡ್ ರೈಲ್ವೇ (ಎಚ್ ಎಸ್‌ಆರ್) ಭಾರತದಲ್ಲಿ ಈ ಯೋಜನೆ ಆರಂಭಿಸಲು ಆಸಕ್ತಿ ತೋರಿದೆ.
ಚೆನ್ನೈನಿಂದ ನವದೆಹಲಿವರೆಗೆ 2,200 ಕಿಮೀ ಅತಿವೇಗ ರೈಲ್ವೇ ಮಾರ್ಗ ಮತ್ತು 1,200 ಕಿಮೀ ದೂರದ ನವದೆಹಲಿ ಮುಂಬೈ ರೈಲು ಮಾರ್ಗಕ್ಕಿರುವ ಯೋಜನೆಯನ್ನು ಹೆಚ್‌ಎಸ್‌ಆರ್ ಸಿದ್ಧಪಡಿಸಿದೆ ಎಂದು ಮಾಧ್ಯಮದ ವರದಿಯಲ್ಲಿ ಹೇಳಲಾಗಿದೆ.
ಇದೀಗ ಪ್ರಸ್ತುತ ಯೋಜನೆಗೆ ಸಂಬಂಧಿಸಿದ ಅಧ್ಯಯನಗಳು ನಡೆಯುತ್ತಿವೆ ಎಂದು ಸಿಆರ್‌ಸಿ ಉಪ ಜನರಲ್ ಇಂಜಿನಿಯರ್ ಜಾವೋ ಗೌಟಾಂಗ್ ಹೇಳಿದ್ದಾರೆ. ಈ ಯೋಜನೆಯ ಬಗ್ಗೆ ನಮಗೆ ಉತ್ತಮ ನಿರೀಕ್ಷೆಗಳಿದ್ದು, ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಮುಂಬೈ ನಿಂದ ಅಹ್ಮದಾಬಾದ್ ವರೆಗಿರುವ 505 ಕಿಮೀ ಅತಿವೇಗ ರೈಲು ಮಾರ್ಗ ನಿರ್ಮಿಸುವುದಕ್ಕಾಗಿ ಜಪಾನ್ ಮುಂದೆ ಬಂದಿದೆ. ಈ ಯೋಜನೆಯ ಬೆನ್ನಲ್ಲೇ ಚೀನಾ ಈ ಹೊಸ ಯೋಜನೆಯೊಂದಿಗೆ ಭಾರತವನ್ನು ಸಮೀಪಿಸಿದೆ.
ಚೆನ್ನೈ ನವದೆಹಲಿ ಯೋಜನೆ ಕಾರ್ಯರೂಪಕ್ಕೆ ಬಂದರೆ ಅದು ಜಗತ್ತಿನ ಎರಡನೇ ಬೃಹತ್ ಅತಿವೇಗ ರೈಲು ಮಾರ್ಗವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


