ಕಪ್ಪುಹಣ ಘೋಷಣೆ: ಐಪಿಸಿ ಅಡಿ ದಾಖಲಾಗುವ ದೂರುಗಳಿಂದ ವಿನಾಯಿತಿ ಇಲ್ಲ
ಕಪ್ಪು ಹಣ ಘೋಷಣೆಗೆ ಕೇಂದ್ರ ಸರ್ಕಾರ ನೀಡಿರುವ ಅವಕಾಶ ಜೂನ್ 1ರಿಂದ ಆರಂಭಗೊಳ್ಳಲಿದೆ ಎಂದು ಮೂಲಗಳು...

Published On :
ನವದೆಹಲಿ: ಕಪ್ಪು ಹಣ ಘೋಷಣೆಗೆ ಕೇಂದ್ರ ಸರ್ಕಾರ ನೀಡಿರುವ ಅವಕಾಶ ಜೂನ್ 1ರಿಂದ ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಘೋಷಿತ ಕಪ್ಪುಹಣವನ್ನು ಭ್ರಷ್ಟಾಚಾರ ಅಥವಾ ವಂಚನೆಯಂತಹ ಅಪರಾಧಗಳ ಮೂಲಕ ಗಳಿಸಿದ್ದಾದರೆ ಭಾರತೀಯ ದಂಡ ಸಂಹಿತೆ(ಐಪಿಸಿ) ಅಡಿಯಲ್ಲಿ ದಾಖಲಿಸಬಹುದಾದ ದೂರುಗಳಿಂದ ವಿನಾಯಿತಿ ದೊರೆಯುವುದಿಲ್ಲ ಎಂದು ಸರ್ಕಾರ ಹೇಳಿದೆ.
ವಿದೇಶಗಳಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣ ಘೋಷಣೆಗೆ ಕಳೆದ ವರ್ಷ ಕೇಂದ್ರ ಸರ್ಕಾರ ಮೂರು ತಿಂಗಳ ಅವಕಾಶ ನೀಡಿತ್ತು. ಈ ವೇಳೆ ಆದಾಯ ತೆರಿಗೆ, ಕಸ್ಟಮ್ಸ್ ಕಾಯ್ದೆ, ಸಂಪತ್ತು ತೆರಿಗೆ ಕಾಯ್ದೆ, ಕಂಪನಿ ಕಾಯ್ದೆ, ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಗಳಿಂದ ವಿನಾಯಿತಿ ನೀಡಲಾಗಿತ್ತು. ಈ ವರ್ಷ ನಾಲ್ಕು ತಿಂಗಳ ಅವಕಾಶ ನೀಡಲಿದ್ದು, ಕಪ್ಪು ಹಣ, ಆಶ್ತಿ ಮೌಲ್ಯದ ಶೇ.45ರಷ್ಟು ತೆರಿಗೆ ಪಾವತಿಸುವ ಮೂಲಕ ಕಾನೂನು ಕ್ರಮದಿಂದ ಪಾರಾಗುವ ಅವಕಾಶ ನೀಡಲಾಗಿದೆ.
ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಪರಿಶೀಲನೆಗೆ ಒಳಪಡಿಸಲಾಗುವುದಿಲ್ಲ ಹಾಗೂ ಸಂಪತ್ತನ್ನು ಮುಚ್ಚಿಟ್ಟ ಅಪರಾಧಕ್ಕೆ ಕೈಗೊಳ್ಳಬಹುದಾದ ವಿಚಾರಣೆಯಿಂದ ವಿನಾಯಿತಿ ಇದೆ. ಆದರೆ, ಐಪಿಸಿ ಅಡಿ ನಡೆಸಬಹುದಾದ ವಿಚಾರಣೆಯಿಂದ ವಿನಾಯಿತಿ ಇಲ್ಲ ಎಂದು ಸರ್ಕಾರ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


