ಅಗ್ನಿ ದುರಂತ ಸಂಭವಿಸಿದ ವಾರದ ನಂತರ ಬಾಗಿಲು ತೆರೆದ ಪುತ್ತಿಂಗಳ್ ದೇವಿ ದೇಗುಲ
ಅಗ್ನಿ ದುರಂತ ಸಂಭವಿಸಿದ ಆರು ದಿನಗಳ ನಂತರ ಕೇರಳದ ಕೊಲ್ಲಂ ಬಳಿಯಿರುವ ಪಾರವೂರ್ ಪುತ್ತಿಂಗಳ್ ದೇವಿ ದೇವಸ್ಥಾನದ ಬಾಗಿಲು ತೆರೆಯಲಾಗಿದೆ.

ಕೊಲ್ಲಂ: ಅಗ್ನಿ ದುರಂತ ಸಂಭವಿಸಿದ ಆರು ದಿನಗಳ ನಂತರ ಕೇರಳದ ಕೊಲ್ಲಂ ಬಳಿಯಿರುವ ಪಾರವೂರ್ ಪುತ್ತಿಂಗಳ್ ದೇವಿ ದೇವಸ್ಥಾನದ ಬಾಗಿಲು ತೆರೆಯಲಾಗಿದೆ.
ದೇವಾಲಯದ ಮುಖ್ಯ ಅರ್ಚಕ ಉನ್ನಿಕೃಷ್ಣನ್ ನಂಬೂದರಿ ಬೆಳಿಗ್ಗೆ 4 ಕ್ಕೆ ದೇವಾಲಯದ ಗರ್ಭಗುಡಿಯನ್ನು ತೆರೆದರು ಈ ನೂರಾರು ಭಕ್ತಾದಿಗಳು ನೆರೆದಿದ್ದರು. ಅಗ್ನಿ ದುರಂತ ಸಂಭವಿಸಿ 4 -5 ದಿನಗಳೇ ಕಳೆದರೂ ದೇವಾಲಯದ ಬಾಗಿಲನ್ನು ತೆರೆದಿರಲಿಲ್ಲ. ಆದರೆ ಪಟಾಕಿ ಹೊಡೆಯುವ ಆಚರಣೆಯ ನಂತರ ಏಳನೇ ದಿನವೇ ದೇವಾಲಯವನ್ನು ತೆರೆಯುವುದು ಸಂಪ್ರದಾಯ ಆಗಿರುವುದರಿಂದ ಪಟಾಕಿ ಹೊಡೆಯುವ ಆಚರಣೆ ನಡೆದು 7 ದಿನಗಳ ನಂತರ ದೇವಾಲಯವನ್ನು ತೆರೆಯಲಾಗಿದೆ.
ಅಗ್ನಿ ದುರಂತ ಸಂಭವಿಸಿದ ನಂತರ 7 ನೇ ದಿನ ದೇವಾಲಯದ ಬಾಗಿಲನ್ನು ತೆರೆಯುವುದರ ಬಗ್ಗೆ ಸಾಕಷ್ಟು ಗೊಂದಲಗಳಿತ್ತಾದರೂ, ದೇವಾಲಯದ ಬಾಗಿಲನ್ನು ತೆರೆಯಲು ಆಡಳಿತ ಮಂಡಳಿ ಒಮ್ಮತದ ತೀರ್ಮಾನ ಕೈಗೊಂಡ ಪರಿಣಾಮ ಇಂದು ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ.
ಒಂದಷ್ಟು ಜನರು ಶನಿವಾರದಿಂದೇ ದೇವಾಲಯವನ್ನು ತೆರೆಯಬೇಕೆಂದು ಒತ್ತಾಯ ಮಾಡಿದ್ದರು. ಆದರೆ ಮತ್ತೆ ಕೆಲವು ಜನರು ಶುದ್ಧೀಕರಣ ಕಾರ್ಯ ನಡೆದ ಬಳಿಕವಷ್ಟೇ ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ಪ್ರಾರಂಭಿಸಬೇಕು ಎಂದು ಪಟ್ಟು ಹಿಡಿದ್ದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


