ದೇಶ

ಕೇರಳದ ಅಮಲ್ ಅಗಸ್ಟಿನ್ ಬಳಿ ಡೊಮೈನ್‌ನೇಮ್‌ ಖರೀದಿಸಿದ ಜುಕರ್‌ಬರ್ಗ್‌

ಬೇಡಿಕೆಗಳು ಎಲ್ಲಿಂದ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಕೇರಳದ ಎರ್ನಾಕುಳಂ ಜಿಲ್ಲೆಯ ಆಲುವಾ ಪಟ್ಟಣದ ಅಮಲ್ ಅಗಸ್ಚಿನ್ ನೋಂದಣಿ ಮಾಡಿದ್ದ...

ಕೇರಳದ ಅಮಲ್ ಅಗಸ್ಟಿನ್ ಬಳಿ ಡೊಮೈನ್‌ನೇಮ್‌ ಖರೀದಿಸಿದ ಜುಕರ್‌ಬರ್ಗ್‌
ಅಮಲ್ ಅಗಸ್ಚಿನ್-ಮಾರ್ಕ್ ಜುಕರ್‌ಬರ್ಗ್‌
Published On :
ಕೊಚ್ಚಿ: ಬೇಡಿಕೆಗಳು ಎಲ್ಲಿಂದ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಕೇರಳದ ಎರ್ನಾಕುಳಂ ಜಿಲ್ಲೆಯ ಆಲುವಾ ಪಟ್ಟಣದ ಅಮಲ್ ಅಗಸ್ಚಿನ್ ನೋಂದಣಿ ಮಾಡಿದ್ದ maxchanzuckerberg.org  ಎಂಬ ಡೊಮೈನ್‌ ನೇಮ್‌ ಅನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ಖರೀದಿಸಿದೆ.
ಅಮಲ್ ಅಗಸ್ಟಿನ್ ಗೆ ವಿವಿಧ ಹೆಸರಿನಲ್ಲಿ ಡೊಮೈನ್ ನೇಮ್ ನೋಂದಣಿ ಮಾಡುವುದೇ ಒಂದು ಹವ್ಯಾಸವಾಗಿತ್ತು. ಇದೇ ಹವ್ಯಾಸ ಇದೀಗ ಆತನನ್ನು ವಿಶ್ವವೇ ಗುರುತಿಸುವಂತೆ ಮಾಡಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ಗೆ ಮಗಳು ಹುಟ್ಟಿದ್ದಳು. ಮಗಳಿಗೆ ಮ್ಯಾಕ್ಸಿಂ ಚಾನ್‌ ಜುಕರ್‌ಬರ್ಗ್‌ ಎಂದು ಹೆಸರಿಡುವುದಾಗಿ ಪ್ರಕಟಿಸಿದ್ದೇ ತಡ, ಅಮಲ್‌ ಈ ಹೆಸರಿನಲ್ಲೊಂದು ಡೊಮೈನ್‌ ನೇಮ್ ನೋಂದಣಿ ಮಾಡಿ ಬಿಟ್ಟಿದ್ದ.
ಡೊಮೈನ್‌ ನೇಮ್‌ಗಳನ್ನು ನೋಂದಣಿ ಮಾಡಿಕೊಳ್ಳುವ ಮತ್ತು ವೆಬ್‌ ಹೋಸ್ಟಿಂಗ್‌ ಕಂಪೆನಿ ಗೊ ಡ್ಯಾಡಿ ಡಾಟ್‌ ಕಾಂ. ಅಮಲ್ ಅಗಸ್ಟಿನ್ ಗೆ ಇ-ಮೇಲ್ ಕಳಿಸಿತ್ತು. ಇಮೇಲ್ ನಲ್ಲಿ ನೀವು ನೋಂದಣಿ ಮಾಡಿರುವ maxchanzuckerberg.org ಡೊಮೈನ್‌ ನೇಮ್‌ ಮಾರಲು ಸಿದ್ಧರಿದ್ದೀರಾ? ಮಾರುವುದಾದರೆ ಎಷ್ಟು ಮೊತ್ತಕ್ಕೆ ಮಾರುವಿರಿ? ಇದನ್ನು ಖರೀದಿಸಲು ಐಕಾನಿಕ್‌ ಕ್ಯಾಪಿಟಲ್‌ ಎಂಬ ಸಂಸ್ಥೆ ಮುಂದೆ ಬಂದಿದೆ ಎಂದು ಕೇಳಲಾಗಿತ್ತು. 
ಇದನ್ನು ಕಂಡ ಅಮಲ್ ಹಿಂದು ಮುಂದು ಯೋಚಿಸದೆ ಬರೀ 700 ಡಾಲರ್‌ ಮಾರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ತನ್ನು ಡೊಮೈನ್ ನೇಮ್ ಖರೀಸಿದ್ದು, ಫೇಸ್ ಬುಕ್ ಅಂತ ಆದರೆ ಅಷ್ಟರಲ್ಲಾಗಲೇ ಕಾಲ ಕಳೆದುಹೋಗಿತ್ತು.
ಜುಕರ್‌ಬರ್ಗ್‌ ಅವರ ಹಣಕಾಸು ವ್ಯವಹಾರಗಳನ್ನು ಐಕಾನಿಕ್‌ ಕ್ಯಾಪಿಟಲ್‌ ನೋಡಿಕೊಳ್ಳುತ್ತದೆ. ಈ ಸಂಸ್ಥೆಯ ವ್ಯವಸ್ಥಾಪಕಿ ಸಾರಾ ಚಾಪೆಲ್‌ ಅವರು ಅಮಲ್‌ಗೆ ಇ–ಮೇಲ್‌ ಕಳುಹಿಸಿ ಈ ವ್ಯವಹಾರ ಅಂತಿಮಗೊಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.