ದೇಶ

ಸಮ-ಬೆಸ ಹೆಸರಿನಲ್ಲಿ ದೆಹಲಿಯನ್ನು ಲೂಟಿ ಮಾಡುತ್ತಿದ್ದಾರೆ ಕೇಜ್ರಿವಾಲ್: ಬಿಜೆಪಿ

ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡುತ್ತೇವೆಂದು ಸಮ-ಬೆಸ ಯೋಜನೆ ಹೆಸರಿನಲ್ಲಿ ಅನಗತ್ಯ ಜಾಹೀರಾತುಗಳನ್ನು ನೀಡುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್...

ಸಮ-ಬೆಸ ಹೆಸರಿನಲ್ಲಿ ದೆಹಲಿಯನ್ನು ಲೂಟಿ ಮಾಡುತ್ತಿದ್ದಾರೆ ಕೇಜ್ರಿವಾಲ್: ಬಿಜೆಪಿ
ಬಿಜೆಪಿ ನಾಯಕ ವಿಜಯ್ ಗೋಯೆಲ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡುತ್ತೇವೆಂದು ಸಮ-ಬೆಸ ಯೋಜನೆ ಹೆಸರಿನಲ್ಲಿ ಅನಗತ್ಯ ಜಾಹೀರಾತುಗಳನ್ನು ನೀಡುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿ ದೆಹಲಿಯನ್ನು ಲೂಟಿ ಮಾಡುತ್ತಿದ್ದಾರೆಂದು ಬಿಜೆಪಿ ಶನಿವಾರ ಆರೋಪ ವ್ಯಕ್ತಪಡಿಸಿದೆ.

ನಿನ್ನೆಯಷ್ಟೇ ಕೇಜ್ರಿವಾಲ್ ಅವರು, ಆಮ್ ಆದ್ಮಿ ಪಕ್ಷ ಜಾರಿಗೆ ತಂದಿರುವ ಸಮ-ಬೆಸ ನಿಯಮವನ್ನು ವಿಫಲವಾಗಬೇಕೆಂದು ಬಿಜೆಪಿ ಬಯಸುತ್ತಿದೆ ಎಂದು ಆರೋಪಿಸಿದ್ದರು.

ಈ ಆರೋಪ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ವಿಜಯ್ ಗೋಯೆಲ್ ಅವರು, ಕೇಜ್ರಿವಾಲ್ ನೇತೃತ್ವದ ಸರ್ಕಾರ ತಾವು ಜಾರಿಗೆ ತಂದಿರುವ ಯೋಜನೆಗಿಂತಲೂ ಅದರ ಜಾಹೀರಾತಿನ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಿದೆ. ಕೇವಲ ರಸ್ತೆಗಳು, ರೇಡಿಯೋ, ಟಿವಿ ಹಾಗೂ ದಿನಪತ್ರಿಕೆಗಳ ಜಾಹೀರಾತುಗಳಿಗಾಗಿಯೇ ಅವರು ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ದೆಹಲಿ ಸರ್ಕಾರ ಜನರ ಹಣವನ್ನು ದುರ್ಬಳಕೆ ಮಾಡಿಕೊಳ್ಳಿತ್ತಿದೆ. ಕೇಜ್ರಿವಾಲ್ ಅವರು ಸಂಚಾರಿ ನಿಯಮ ಹಾಗೂ ಮಾಲಿನ್ಯದ ಕಡೆ ಗಮನ ಹರಿಸುತ್ತಿದ್ದು, ಸಮ-ಬೆಸ ಎಂದು ಹೇಳಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇದೀಗ ಅಧಿಕಾರದಲ್ಲಿರುವ ಸರ್ಕಾರ ಯಾವುದೇ ತಯಾರಿ ಇಲ್ಲದೆಯೇ ರಸ್ತೆಗಿಳಿಯುತ್ತಿದೆ. ನಿಜಕ್ಕೂ ಸಮ-ಬೆಸ ಯಶಸ್ವಿಯಾಗಿರುವುದೇ ಆದರೆ, ಯೋಜನೆಯನ್ನು ಶಾಶ್ವತವಾಗಿ ಏಕೆ ಜಾರಿಗೆ ತರುತ್ತಿಲ್ಲ. ಸಮ-ಬೆಸ ಯೋಜನೆ ಹೆಸರಿನಲ್ಲಿ ಕೇಜ್ರಿವಾಲ್ ಅವರು ಆಟವಾಡುತ್ತಿದ್ದು, ಜಾಹೀರಾತು ಉದ್ದೇಶಕ್ಕಾಗಿ ಮಾತ್ರ 15 ದಿನಕ್ಕೊಮ್ಮೆ ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.