ಬಿಜೆಪಿಗೆ ಮತಹಾಕಿದ ಪತ್ನಿಗೆ ಸ್ಥಳದಲ್ಲಿಯೇ ವಿಚ್ಛೇದನ ನೀಡಿದ ಪತಿರಾಯ
ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತಹಾಕಲು ತಿರಸ್ಕರಿಸಿ ಬಿಜೆಪಿಗೆ ಮತ ಹಾಕಿದ ಪತ್ನಿಗೆ ಮುಸ್ಲಿಂ ವ್ಯಕ್ತಿಯೊಬ್ಬ ಸ್ಥಳದಲ್ಲೇ ತಲಾಕ್ ನೀಡಿದ ...

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತಹಾಕಲು ತಿರಸ್ಕರಿಸಿ ಬಿಜೆಪಿಗೆ ಮತ ಹಾಕಿದ ಪತ್ನಿಗೆ ಮುಸ್ಲಿಂ ವ್ಯಕ್ತಿಯೊಬ್ಬ ಸ್ಥಳದಲ್ಲೇ ತಲಾಕ್ ನೀಡಿದ ಆಘಾತಕಾರಿ ಘಟನೆ ನಡೆದಿದೆ.
ಆಸ್ಸಾಂನ ಸೋನಿತ್‌ಪುರ್ ಜಿಲ್ಲೆಯ ಡೊನಮ್ ಅಡ್ಡಹಾಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಮುಖಂಡರು, ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ವೋಟು ಮಾಡುವಂತೆ ಕಟ್ಟು ನಿಟ್ಟಿನ ಆದೇಶ ಜಾರಿಗೊಳಿಸಿದ್ದರು. ಆದರೆ, ಐನುದ್ದೀನ್ ಎಂಬಾತನ ಪತ್ನಿಯಾದ ದಿಲ್ವಾರಾ ಬೇಗಂ , ಗ್ರಾಮ ಪಂಚಾಯಿತಿಯ ಆದೇಶ ಧಿಕ್ಕರಿಸಿ ಬಿಜೆಪಿ ಅಭ್ಯರ್ಥಿಯಾದ ಪ್ರಮೋದ್ ಬೋರಾಠಾಕೂರ್‌ಗೆ ಮತ ಹಾಕಿದ್ದಳು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಬಿಜೆಪಿಗೆ ಮತ ಹಾಕಬೇಡಿ ಎನ್ನುವ ಆದೇಶವನ್ನು ಹೊರಡಿಸಿದ್ದರು. ಆದರೆ ಪಂಚಾಯಿತಿಯ ಆದೇಶ ಮೀರಿ ಬಿಜೆಪಿಗೆ ಮತಹಾಕಿದ್ದರಿಂದ ಪತಿ ಆಕೆಗೆ ತಲಾಕ್ ನೀಡಿದ್ದಾನೆ.
ಪತ್ನಿ ದಿಲ್ವಾರಾ, ಗ್ರಾಮ ಪಂಚಾಯಿತಿಯ ಆದೇಶ ಧಿಕ್ಕರಿಸಿ ಬಿಜೆಪಿಗೆ ಮತಹಾಕಿರುವುದು ಕಂಡು ಆಕ್ರೋಶಗೊಂಡ ಪತಿ ಐನುದ್ದೀನ್, ಸ್ಥಳದಲ್ಲಿಯೇ ಪತ್ನಿಗೆ ತಲಾಕ್ ನೀಡಿರುವುದಾಗಿ ಘೋಷಿಸಿದ್ದಾನೆ ಮೇ 19 ರಂದು . ಅಸ್ಸಾಂ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


