ದೇಶ

ಇನ್ನೂ ಮುಚ್ಚಿದೆ ಅಗ್ನಿದುರಂತ ನಡೆದ ಕೇರಳದ ಪುತ್ತಿಂಗಳ್ ದೇವಿ ದೇವಸ್ಥಾನ

ಕೇರಳದ ಕೊಲ್ಲಂ ಬಳಿಯಿರುವ ಪಾರವೂರ್ ಪುತ್ತಿಂಗಳ್ ದೇವಿ ದೇವಸ್ಥಾನದಲ್ಲಿ ಅಗ್ನಿ ದುರಂತ ಸಂಭವಿಸಿ ಆರು ದಿನಗಳು ಕಳೆದಿದ್ದರೂ ದೇವಾಲಯದಲ್ಲಿ ಇನ್ನೂ ಪೂಜಾ ಕಾರ್ಯಗಳು ಪ್ರಾರಂಭವಾಗಿಲ್ಲ.

ಇನ್ನೂ ಮುಚ್ಚಿದೆ ಅಗ್ನಿದುರಂತ ನಡೆದ ಕೇರಳದ ಪುತ್ತಿಂಗಳ್ ದೇವಿ ದೇವಸ್ಥಾನ
ಕೇರಳದ ಪುತ್ತಿಂಗಳ್ ದೇವಿ ದೇವಸ್ಥಾನ
Published On :

ಕೊಲ್ಲಂ: ಕೇರಳದ ಕೊಲ್ಲಂ ಬಳಿಯಿರುವ ಪಾರವೂರ್ ಪುತ್ತಿಂಗಳ್ ದೇವಿ ದೇವಸ್ಥಾನದಲ್ಲಿ ಅಗ್ನಿ ದುರಂತ ಸಂಭವಿಸಿ ಆರು ದಿನಗಳು ಕಳೆದಿದ್ದರೂ ದೇವಾಲಯದಲ್ಲಿ ಇನ್ನೂ ಪೂಜಾ ಕಾರ್ಯಗಳು ಪ್ರಾರಂಭವಾಗಿಲ್ಲ.
ದೇವಾಲಯದ ದಿನನಿತ್ಯದ ಕಾರ್ಯಕ್ರಮಗಳನ್ನು ನಡೆಸುವುದರ ಬಗ್ಗೆ ಇನ್ನೂ ಗೊಂದಲಗಳಿರುವುದರಿಂದ ಪೂಜಾ ಕಾರ್ಯಗಳು ಪ್ರಾರಂಭವಾಗಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಒಂದಷ್ಟು ಜನರು ಶನಿವಾರದಿಂದೇ ದೇವಾಲಯವನ್ನು ತೆರೆಯಬೇಕೆಂದು ಒತ್ತಾಯ ಮಾಡಿದ್ದರು. ಆದರೆ ಮತ್ತೆ ಕೆಲವು ಜನರು ಶುದ್ಧೀಕರಣ ಕಾರ್ಯ ನಡೆದ ಬಳಿಕವಷ್ಟೇ ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ಪ್ರಾರಂಭಿಸಬೇಕು ಎಂದು ಪಟ್ಟು ಹಿಡಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಇನ್ನು ದೇವಾಲಯದ 15 ಸದಸ್ಯರ ಸಮಿತಿ ನ್ಯಾಯಾಂಗ ಬಂಧನದಲ್ಲಿರುವ ಕಾರಣಾದಿಂದಲೂ ಪೂಜಾ ಕಾರ್ಯಗಳು ಸ್ಥಗಿತಗೊಳ್ಳಲು ಕಾರಣ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.