ಪ್ರಧಾನಿ ಮೋದಿ ಸತ್ಯ ಮಾತನಾಡುವುದಿಲ್ಲ: ಮನಮೋಹನ್ ಸಿಂಗ್
ಮೋದಿಯವರನ್ನು ಟೀಕೆ ಮಾಡುವುದಲ್ಲ. ತಾವು ಮಾತನಾಡುತ್ತಿರುವುದು ಸತ್ಯವಲ್ಲ ಎಂಬುದು ಅವರಿಗೇ ತಿಳಿದಿದೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು...

ದಿಸ್ಪುರ್: ಮೋದಿಯವರನ್ನು ಟೀಕೆ ಮಾಡುವುದಲ್ಲ. ತಾವು ಮಾತನಾಡುತ್ತಿರುವುದು ಸತ್ಯವಲ್ಲ ಎಂಬುದು ಅವರಿಗೇ ತಿಳಿದಿದೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ಅಸ್ಸಾಂನ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿಯವರು ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮೋದಿಯವರನ್ನು ಟೀಕಿಸಲು ನಾನು ಇಚ್ಛಿಸುವುದಿಲ್ಲ. ಅವರು ಏನನ್ನು ಹೇಳುತ್ತಿದ್ದಾರೋ ಅದು ಸತ್ಯವಲ್ಲ ಎಂಬುದು ಅವರಿಗೇ ತಿಳಿದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಸ್ಸಾಂ ವಿಧಾನಸಭಾ ಚುನಾವಣೆ ಕುರಿತಂತೆ ಮಾತನಾಡಿರುವ ಅವರು, ಅಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಾಗಿ ವಿಶ್ವಾಸವಿದೆ. 15 ವರ್ಷಗಳಿಂದ ಉತ್ತಮವಾಗಿ ಕೆಲಸ ಮಾಡಿದ್ದ ಹಳೆಯ ಸರ್ಕಾರವನ್ನು ಜನರು ಆಯ್ಕೆ ಮಾಡುತ್ತಾರೆಂದು ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಅಸ್ಸಾಂನ ರಾಹಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮೋದಿಯವರು, ಕಳೆದ ಯುಪಿಎ ಅವಧಿಯ "ರಿಮೋಟ್ ಕಂಟ್ರೋಲ್" ಸರ್ಕಾರದಿಂದಾಗಿ ದೇಶ ಸಾಕಷ್ಟು ನಲುಗಿತ್ತು. ಆದೇ ಸ್ಥಿತಿ ಅಸ್ಸಾಂನಲ್ಲಿ ಮರುಕಳಿಸಲು ತಾವು ಬಿಡುವುದಿಲ್ಲ. ಮನಮೋಹನ್ ಸಿಂಗ್ ಅವರು ನೀವು ಅಧಿಕಾರದಲ್ಲಿದ್ದಾಗ ನಡೆದ ಅವ್ಯವಹಾರಗಳೇ ಇಂದು ಹೆಚ್ಚೆಚ್ಚು ಮಾತನಾಡುತ್ತಿವೆ. ಡಾ.ಸಿಂಗ್ ಅವರು ಹೇಳಿದ್ದು ನಿಜ, ಅವರು ಅಧಿಕಾರದಲ್ಲಿದ್ದಾಗ ನಡೆದ ಅವ್ಯವಹಾರಗಳು ಇಂದಿಗೂ ಮಾತನಾಡುತ್ತಿವೆ ಎಂದು ಟೀಕಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


