ಏರ್ ಇಂಡಿಯಾ ವಿಮಾನ ಸ್ಥಳಾಂತರ ವೇಳೆ ಕುಸಿದ ಕ್ರೇನ್; ತಪ್ಪಿದ ಭಾರಿ ಅನಾಹುತ
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ತರಬೇತಿ ವಿಮಾನವನ್ನು ಬೇಗಂ ಪೇಟ್ ವಿಮಾನ ನಿಲ್ದಾಣಕ್ಕೆ ಸಾಗಿಸುತ್ತಿದ್ದ ವೇಳೆ ವಿಮಾನ ಆಯತಪ್ಪಿ ಕೆಳಗೆ ಬಿದ್ದ ಘಟನೆ ನಡೆದಿದೆ.

ಹೈದರಾಬಾದ್: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ತರಬೇತಿ ವಿಮಾನವನ್ನು ಬೇಗಂ ಪೇಟ್ ವಿಮಾನ ನಿಲ್ದಾಣಕ್ಕೆ ಸಾಗಿಸುತ್ತಿದ್ದ ವೇಳೆ ವಿಮಾನ ಆಯತಪ್ಪಿ ಕೆಳಗೆ ಬಿದ್ದ ಘಟನೆ ನಡೆದಿದೆ.
ಏರ್ ಇಂಡಿಯಾ ಸಂಸ್ಥೆಗೆ ಸೇರಿದ ಲಘು ವಿಮಾನವೊಂದನ್ನು ದುರಸ್ತಿಗಾಗಿ ಬೇಗಂ ಪೇಟ್ ವಿಮಾನ ನಿಲ್ದಾಣದಲ್ಲಿರುವ ಶೆಡ್ ಗೆ ಕ್ರೇನ್ ಮೂಲಕ ಸಾಗಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಘಟನೆ ವೇಳೆ ಅಲ್ಲಿ ಯಾರೂ ಇಲ್ಲದ ಕಾರಣ ಆಗ ಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ.
ಮೂಲಗಳ ಪ್ರಕಾರ ಏರ್ ಇಂಡಿಯಾ ಶೆಡ್ ನಲ್ಲಿದ್ದ ವಿಮಾನವನ್ನು ಸಂಸ್ಥೆ ಸಿಬ್ಬಂದಿಗಳ ತರಬೇತಿಗೆ ಬಳಕೆ ಮಾಡಲು ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ವಿಮಾನವನ್ನು ಬೇಗಂ ಪೇಟ್ ನಲ್ಲಿರುವ ವಿಮಾನ ದುರಸ್ತಿ ಮಾಡುವ ಶೆಡ್ ರವಾನಿಸಲು ಸಂಸ್ಥೆ ಮುಂದಾಗಿತ್ತು. ಹೀಗಾಗಿ ಕ್ರೇನ್ ಮೂಲಕ ವಿಮಾನವನ್ನು ರವಾನಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಿಮಾನವನ್ನು ಸಾಗಿಸುತ್ತಿದ್ದ ಕ್ರೇನ್ ಆಯತಪ್ಪುತ್ತಿದ್ದಂತೆಯೇ ವಿಮಾನ ಪಕ್ಕದಲ್ಲಿಯೇ ಇದ್ದ ಟಿಟಿಡಿಗೆ ಸೇರಿದ ಶಾಲೆಯ ಕಾಂಪೌಂಡ್ ಮೇಲೆ ಬಿದ್ದಿದೆ. ಘಟನೆಯಿಂದಾಗಿ ವಿಮಾನ ಸಾಗಿಸುತ್ತಿದ್ದ ಕ್ರೇನ್ ಗೆ ಹಾನಿಯಾಗಿದ್ದು, ವಿಮಾನ ರಸ್ತೆಯ ಮೇಲೆ ಬಿದ್ದಿದ್ದರಿಂದ ಈ ಭಾಗದಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬಳಿಕ ಮತ್ತೊಂದು ಕ್ರೇನ್ ನ ಸಹಾಯಪಡೆದು ವಿಮಾನವನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


