ಕೃಷಿ ಪಂಪ್, ಫ್ಯಾನ್ ವಿತರಣೆ ಯೋಜನೆಗೆ ಚಾಲನೆ
ವಿದ್ಯುತ್ ಬಿಲ್‌ನಲ್ಲಿ ಉಳಿತಾಯ ಮಾಡಿಕೊಡುವ ಸ್ಮಾರ್ಟ್ ಕೃಷಿ ಪಂಪ್ ಮತ್ತು ಫ್ಯಾನ್‌ಗಳನ್ನು ವಿತರಿಸುವ ಯೋಜನೆಗೆ ಕೇಂದ್ರ ಸರ್ಕಾರ...

Published On :
ನವದೆಹಲಿ: ವಿದ್ಯುತ್ ಬಿಲ್‌ನಲ್ಲಿ ಉಳಿತಾಯ ಮಾಡಿಕೊಡುವ ಸ್ಮಾರ್ಟ್ ಕೃಷಿ ಪಂಪ್ ಮತ್ತು ಫ್ಯಾನ್‌ಗಳನ್ನು ವಿತರಿಸುವ ಯೋಜನೆಗೆ ಕೇಂದ್ರ ಸರ್ಕಾರ ಗುರುವಾರ ಚಾಲನೆ ನೀಡಿದೆ.
ಆಂಧ್ರಪ್ರದೇಶದ ವಿಜಯವಾಡಾದಲ್ಲಿ ವಿದ್ಯುತ್ ಸಚಿವ ಪೀಯುಷ್ ಗೋಯಲ್ , ನ್ಯಾಷನನ್ ಎನರ್ಜಿ ಎಫಿಶಿಯಂಟ್ ಅಗ್ರಿಕಲ್ಚರ್ ಪಂಪ್ಸ್ ಪ್ರೋಗ್ರಾಂ ಮತ್ತು ನ್ಯಾಷನಲ್ ಎನರ್ಜಿ ಎಫಿಶಿಯಂಟ್ ಫ್ಯಾನ್ ಪ್ರೋಗ್ರಾಂ ಎಂಬ ಹೆಸರಿನ ಯೋಜನೆ ಚಾಲನೆ ನೀಡಿದ್ದಾರೆ.
ಇಂಧನ ಕ್ಷಮತೆಯ ಕೃಷಿ ಪಂಪ್ ಸೆಟ್ ವಿತರಣೆಯಿಂದ ರು. 20,000 ಕೋಟಿ ಸಬ್ಸಿಡಿ ಉಶಿತಾಯ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.
ಅದೇ ವೇಳೆ ಫ್ಯಾನ್‌ನಿಂದ ಪ್ರತಿ ಗ್ರಾಹಕನಿಗೆ ವರ್ಷದಲ್ಲಿ ವಿದ್ಯುತ್ ಬಿಲ್ ನಲ್ಲಿ ರು. 700 ರಷ್ಟು ಉಳಿತಾಯವಾಗಲಿದೆ. ಅಷ್ಟೇ ಅಲ್ಲ, ಕೃಷಿ ಪಂಪ್‌ಗೆ ಸಿಮ್ ಆಧಾರಿತ ತಂತ್ರಜ್ಞಾನದ ಅನುಕೂಲ ಕಲ್ಪಿಸಲಾಗುತ್ತಿದ್ದು, ರೈತ ತನ್ನ ಮನೆಯಿಂದಲೇ ಮೊಬೈಲ್ ಫೋನ್ ಬಳಸಿಕೊಂಡು ಪಂಪ್‌ನ ಸ್ವಿಚ್‌ನ್ನು ಸ್ಟಾರ್ಟ್ ಮತ್ತು ಆಫ್ ಮಾಡಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


