ದೇಶ

ರಾಫೆಲ್ ಡೀಲ್ ಅನಿಶ್ಚಿತತೆ, ಭಾರತದಿಂದ ಅಮೆರಿಕದ ಎಫ್/ಎ-18 ಫೈಟರ್ ಜೆಟ್ ಖರೀದಿ ಸಾಧ್ಯತೆ

ಭಾರತ- ಫ್ರಾನ್ಸ್ ನಡುವಿನ ರಾಫೆಲ್ ಫೈಟರ್ ಜೆಟ್ ಖರೀದಿ ಅನಿಶ್ಚಿತವಾಗಿದ್ದು ಅಮೆರಿಕದ ಎಫ್/ಎ-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ವಿಮಾನ ಖರೀದಿಸುವ ಆಯ್ಕೆಯನ್ನು ಭಾರತ ಸರ್ಕಾರ ಪರಿಗಣಿಸಿದೆ...

ರಾಫೆಲ್ ಡೀಲ್ ಅನಿಶ್ಚಿತತೆ, ಭಾರತದಿಂದ ಅಮೆರಿಕದ ಎಫ್/ಎ-18 ಫೈಟರ್ ಜೆಟ್ ಖರೀದಿ ಸಾಧ್ಯತೆ
ಎಫ್/ಎ-18 ಫೈಟರ್ ಜೆಟ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಭಾರತ- ಫ್ರಾನ್ಸ್ ನಡುವಿನ ರಾಫೆಲ್ ಫೈಟರ್ ಜೆಟ್ ಖರೀದಿ ಅನಿಶ್ಚಿತವಾಗಿದ್ದು ಅಮೆರಿಕದ ಎಫ್/ಎ-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ವಿಮಾನ ಖರೀದಿಸುವ ಆಯ್ಕೆಯನ್ನು ಭಾರತ ಸರ್ಕಾರ ಪರಿಗಣಿಸಿದೆ ಎಂದು ತಿಳಿದುಬಂದಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತ ಸರ್ಕಾರ ಭಾರತೀಯ ವಾಯುಪಡೆಗೆ ಅಮೆರಿಕದ ಎಫ್/ಎ-18 ಸೂಪರ್ ಹಾರ್ನೆಟ್ ಫೈಟರ್ ಗಳನ್ನು ಪಡೆಯುವುದರ ಬಗ್ಗೆ ಯೋಚಿಸುತ್ತಿದೆ. ಅಮೆರಿಕ- ಭಾರತ ದ್ವಿಪಕ್ಷೀಯ ಸಂಬಂಧಗಳನ್ನು ಉತ್ತಮಗೊಳಿಸಲು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಷ್ ಕಾರ್ಟರ್ ಏ.10 ರಿಂದ 12 ವರೆಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ ಈ ವೇಳೆ ಎಫ್/ಎ-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ವಿಮಾನ ಖರೀದಿ ಬಗ್ಗೆ ಮಾತುಕತೆ ನಿರೀಕ್ಷಿಸಲಾಗಿದೆ. 
ಎಫ್/ಎ-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ವಿಮಾನ ಬೋಯಿಂಗ್ ನಿರ್ಮಿತವಾಗಿದೆ. ಈಗಾಗಲೇ ಬೋಯಿಂಗ್ ಕಂಪನಿಯ ಪ್ರತಿನಿಧಿಗಳು  ಅಮೆರಿಕದ ಫೈಟರ್ ಜೆಟ್ ನ ಉತ್ಪಾದನಾ ಘಟಕ ನಿರ್ಮಾಣದ ರೂಪುರೇಷೆಗಳನ್ನು ಭಾರತ ಸರ್ಕಾರದೆದುರು ಪ್ರಸ್ತುತಪಡಿಸಿದ್ದಾರೆ. ಎಫ್-16  ಫೈಟರ್ ಜೆಟ್ ಗಳನ್ನು ಉತ್ಪಾದಿಸುವ ಲಾಕ್ಹೀಡ್ ಮಾರ್ಟಿನ್ ಕಂಪನಿಯೂ ಬೋಯಿಂಗ್ ಮಾದರಿಯಲ್ಲೇ ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.