ದೇಶ

ರಾತ್ರಿ 8 ರ ನಂತರ ಇನ್ಮುಂದೆ ಎಟಿಎಂಗಳಲ್ಲಿ ಹಣ ಸಿಗೋದು ಡೌಟ್!

ರಾತ್ರಿ ತಡವಾಗಿ ಬ್ಯಾಂಕ್​ನಿಂದ ಹಣ ವಾಪಸ್ ಪಡೆಯಲು ಇನ್ನು ಮುಂದೆ ಎಟಿಎಂಗಳು ನಿಮ್ಮನ್ನು ಸಹಕರಿಸುವುದಿಲ್ಲ, ಏಕೆಂದರೆ ಎಟಿಎಂಗಳಿಗೆ ನಗದು ಪುನರ್...

ರಾತ್ರಿ 8 ರ ನಂತರ ಇನ್ಮುಂದೆ ಎಟಿಎಂಗಳಲ್ಲಿ ಹಣ ಸಿಗೋದು ಡೌಟ್!
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ರಾತ್ರಿ ತಡವಾಗಿ ಬ್ಯಾಂಕ್​ನಿಂದ ಹಣ ವಾಪಸ್ ಪಡೆಯಲು ಇನ್ನು ಮುಂದೆ ಎಟಿಎಂಗಳು ನಿಮ್ಮನ್ನು ಸಹಕರಿಸುವುದಿಲ್ಲ, ಏಕೆಂದರೆ ಎಟಿಎಂಗಳಿಗೆ ನಗದು ಪುನರ್​ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸಾಯಂಕಾಲದ ಬಳಿಕ ಎಟಿಎಂನಿಂದ ಹಣ ಪಡೆಯಬಯಸುವ ಸಹಸ್ರಾರು ಮಂದಿಗೆ ನಿರಾಸೆಗೊಳಿಸುವ  ನಿಯಮಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರುವ ಸಾಧ್ಯತೆಗಳಿವೆ.

ರಾತ್ರಿ 8 ಗಂಟೆಯ ಬಳಿಕ ಎಟಿಎಂಗಳನ್ನು ಪುನರ್​ಭರ್ತಿ ಮಾಡಬಾರದು ಎಂಬ ಪ್ರಸ್ತಾವವನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಎಟಿಎಂಗಳಿಗೆ ಹಣ ಭರ್ತಿ ಮಾಡುವ ಖಾಸಗಿ ನಗದು ಹಣ ಸಾಗಣೆ ಸಂಸ್ಥೆಗಳು ಬ್ಯಾಂಕುಗಳಿಂದ ದಿನದ ಪೂರ್ವಾರ್ಧದಲ್ಲಿ ಅಂದರೆ ಮಧ್ಯಾಹ್ನಕ್ಕೆ ಮೊದಲೇ ನಗದು ಸಂಗ್ರಹ ಮಾಡಿಕೊಳ್ಳಬೇಕು.

ಅಲ್ಲದೆ ಸಿಸಿಟಿವಿ ಮತ್ತು ಜಿಪಿಎಸ್ ಅಳವಡಿಕೆಯಾಗಿರುವ ವಿಶೇಷ ವಿನ್ಯಾಸದ ನಗದು ವ್ಯಾನ್​ಗಳನ್ನು ಇದಕ್ಕಾಗಿ ಬಳಸಬೇಕು, ಒಂದು ಟ್ರಿಪ್​ನಲ್ಲಿ 5 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಒಯ್ಯುವಂತಿಲ್ಲ. ಯಾವುದೇ ಅಹಿತಕರ ಘಟನೆ ನಿಭಾಯಿಸಲು ಇಬ್ಬರು ಸಶಸ್ತ್ರ ಗಾರ್ಡ್​ಗಳಿರಬೇಕು ಮತ್ತು ವಿಶೇಷ ಪರಿಸ್ಥಿತಿ ನಿಭಾಯಿಸಲು ಚಾಲಕರಿಗೆ ತರಬೇತಿ ನೀಡಿರಬೇಕು, ಚಾಲಕ ಸುರಕ್ಷಿತವಾಗಿ ವಾಹನ ಚಲಾಯಿಸಲು ಸಮರ್ಥನಾಗಿರಬೇಕು ಇತ್ಯಾದಿ ನಿಯಮಾವಳಿಗಳನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.