ಅವಕಾಶವಂಚಿತ ದೇಶಗಳಿಗೆ ದನಿ
``ಶಾಂತಿ ಸ್ಥಾಪನಾ ಕಾರ್ಯದಲ್ಲಿ ಸಾಕಷ್ಟು ಕೊಡುಗೆ ನೀಡುವ ದೇಶಗಳಿಗೆ ವಿಶ್ವಸಂಸ್ಥೆಯಲ್ಲಿ ನಿರ್ಧಾರಕೈಗೊಳ್ಳುವ ಅವಕಾಶ ನೀಡದಿರುವುದು ದುರದೃಷ್ಟಕರ''. ಇದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರೀತಿ...

ವಿಶ್ವಸಂಸ್ಥೆ: ``ಶಾಂತಿ ಸ್ಥಾಪನಾ ಕಾರ್ಯದಲ್ಲಿ ಸಾಕಷ್ಟು ಕೊಡುಗೆ ನೀಡುವ ದೇಶಗಳಿಗೆ ವಿಶ್ವಸಂಸ್ಥೆಯಲ್ಲಿ ನಿರ್ಧಾರಕೈಗೊಳ್ಳುವ ಅವಕಾಶ ನೀಡದಿರುವುದು ದುರದೃಷ್ಟಕರ''. ಇದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರೀತಿ.
ಭಯೋತ್ಪಾದನೆ ನಿಗ್ರಹದ ವಿಚಾರ ಸಂಬಂಧ ಸೋಮವಾರ ಬೆಳಗ್ಗೆ ಸ್ಯಾನೋಸೆಯಲ್ಲಿ ವಿಶ್ವಸಂಸ್ಥೆ ವಿರುದ್ಧ ಹರಿಹಾಯ್ದಿದ್ದ ಪ್ರಧಾನಿ ಮೋದಿ, ರಾತ್ರಿ ನಡೆದ ವಿಶ್ವಸಂಸ್ಥೆ ಶಾಂತಿಸ್ಥಾಪನಾ ಶೃಂಗದಲ್ಲಿ ಮತ್ತೊಮ್ಮೆ ತಮ್ಮ ಆಕ್ರೋಶ ಹೊರಹಾಕಿದರು.
ಶೃಂಗದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸುಧಾರಣೆಯ ವೇಗ ಹೆಚ್ಚಿಸುವಂತೆ ಮೋದಿ ಒತ್ತಾಯಿಸಿದರು. ಈಗಿನ ಶಾಂತಿ ಸ್ಥಾಪನಾ ರಾಷ್ಟ್ರಗಳು ಶಾಂತಿ ಮತ್ತು ಭದ್ರತೆಯನ್ನು ನಿರ್ವಹಿಸುವುದು ಮಾತ್ರವಲ್ಲ, ಅನೇಕ ಸವಾಲುಗಳನ್ನೂ ಎದುರಿಸುತ್ತಿವೆ. ಕೆಲವೊಮ್ಮೆ ತಮ್ಮ ಜೀವವನ್ನೇ ಪಣಕ್ಕಿಡಬೇಕಾದ ಸಂದರ್ಭವೂ ಎದುರಾಗುತ್ತವೆ. ಆದರೆ, ಇಷ್ಟೆಲ್ಲ ಕಷ್ಟಗಳನ್ನು
ಸಹಿಸಿದರೂ ಆ ದೇಶಗಳಿಗೆ ನಿರ್ಧಾರಕೈಗೊಳ್ಳುವ ಪ್ರಕ್ರಿಯೆಯಲ್ಲಿ ಯಾವುದೇ ಪಾತ್ರವಿಲ್ಲ. ಇದು ನಿಜಕ್ಕೂ ವಿಷಾದನೀಯ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ, ಭಾರತವು ಶಾಂತಿಸ್ಥಾಪನೆಗೆ ಬದಟಛಿವಾಗಿದ್ದು, 850 ಯೋಧರು, ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿರುವ 3 ಪೊಲೀಸ್ ಘಟಕಗಳನ್ನು ಒಳಗೊಂಡ ಒಂದು ಹೆಚ್ಚುವರಿ ಬೆಟಾಲಿಯನ್ ಅನ್ನು ಭಾರತವು ಕೊಡುಗೆಯಾಗಿ ನೀಡುತ್ತಿದೆ ಎಂದೂ ಮೋದಿ ಘೋಷಿಸಿದರು. ಈ ಶೃಂಗದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಅಮೆರಿಕ ಅಧ್ಯಕ್ಷ ಒಬಾಮ, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್, ಪಾಕ್ ಪ್ರಧಾನಿ ನವಾಜ್ ಷರೀಫ್, ಜಪಾನ್ ಪ್ರಧಾನಿ ಶಿನ್ಝೋ ಅಬೆ ಮತ್ತಿತರ ನಾಯಕರು ಇದ್ದರು.
ಶಾಂತಿಸ್ಥಾಪನೆ ನಿರ್ಣಯ: ಪ್ರಧಾನಿ ಮೋದಿ ಭಾಷಣದ ಬೆನ್ನಲ್ಲೇ ಭಾರತ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳ ನಾಯಕರು ವಿಶ್ವಸಂಸ್ಥೆ ಶಾಂತಿಸ್ಥಾಪನಾ ಕಾರ್ಯವನ್ನು ಆಧುನೀಕರಿಸುವ ಮತ್ತು ಶಾಂತಿಗಾಗಿ ಪಡೆಗಳನ್ನು ನೀಡುವ ರಾಷ್ಟ್ರಗಳು ಹಾಗೂ ಭದ್ರತಾ ಮಂಡಳಿ ನಡುವೆ ಸಮನ್ವಯತೆ ಸಾಧಿಸುವ ನಿರ್ಣಯವನ್ನು ಕೈಗೊಂಡರು. ಜತೆಗೆ, ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ, ಕಿರುಕುಳ ಕುರಿತು ಶೂನ್ಯ ಸಹಿಷ್ಣುತೆ ತಾಳುವ ನಿರ್ಣಯಕ್ಕೂ ಬೆಂಬಲಿಸಿದರು.
ಮೋದಿಯತ್ತ ಕೈಬೀಸಿದ ಷರೀಫ್: ಭಾರತ-ಪಾಕ್ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಉಂಟಾಗಿರುವ ನಡುವೆಯೇ ವಿಶ್ವಸಂಸ್ಥೆ ಸಾಮಾನ್ಯಸಭೆ ನಡೆದಿದ್ದು, ಮೋದಿ-ಷರೀಫ್ ನಡುವೆ ಏನಾದರೂ ಮಾತುಕತೆ ನಡೆಯಬಹುದೇ ಎಂಬ ಕುತೂಹಲ ಮೂಡಿತ್ತು. ಆದರೆ, ಉಭಯ ನಾಯಕರ ನಡುವೆ ಹಸ್ತಲಾಘವ ವಾಗಲೀ, ಅನೌಪಚಾರಿಕ ಭೇಟಿಯಾಗಲೀ ನಡೆದಿಲ್ಲ. ಬದಲಿಗೆ, ವಿಶ್ವಸಂಸ್ಥೆಯ ಹಾಲ್ ನಲ್ಲಿ ಎದುರುಬದುರಾಗಿ ಕುಳಿತಿದ್ದ ಇಬ್ಬರೂ ನಾಯಕರು ಪರಸ್ಪರರನ್ನು ನೋಡಿ ಮುಗುಳ್ನಕ್ಕು, ಕೈ ಬೀಸಿದ್ದು ಕಂಡುಬಂತು.
ಸ್ವದೇಶಕ್ಕೆ ವಾಪಸ್: 5 ದಿನಗಳ ಅಮೆರಿಕ ಪ್ರವಾಸ ಮುಗಿಸಿ ಮಂಗಳವಾರ ಪ್ರಧಾನಿ ಮೋದಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ನವೆಂಬರ್ ತಿಂಗಳಲ್ಲಿ ಅವರು ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿನ ಪ್ರಸಿದಟಛಿ ವಿಂಬ್ಲೆ ಸ್ಟೇಡಿಯಂನಲ್ಲಿ ಭಾಷಣ ಮಾಡಲಿದ್ದಾರೆ. ಅಲ್ಲಿ ಅವರಿಗೆ ಒಲಿಂಪಿಕ್ ಶೈಲಿಯ ಸ್ವಾಗತ ಸಿಗಲಿದ್ದು, ಸುಮಾರು 75 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಬಿಜೆಪಿ ನಾಯಕ ರಾಮ್ ಮಾಧವ್ ತಿಳಿಸಿದ್ದಾರೆ.
ನೆಹರೂ, ಇಂದಿರಾ ಖ್ಯಾತಿ ಗಳಿಸಿರಲಿಲ್ಲವೇ?
ಪ್ರಧಾನಿ ಮೋದಿ ಅಮೆರಿಕ ಪ್ರವಾಸವು ಭಾರಿ ಪ್ರಚಾರ ಗಿಟ್ಟಿಸಿಕೊಂಡ ಬೆನ್ನಲ್ಲೇ ಬಿಜೆಪಿಗೆ ಶಿವಸೇನೆ ಟಾಂಗ್ ನೀಡಿದೆ. ``ಸಾಮಾಜಿಕ ತಾಣಗಳು ಇಲ್ಲದೆಯೂ ನೆಹರೂ, ಇಂದಿರಾ ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದರು'' ಎನ್ನುವ ಮೂಲಕ ಮೋದಿ ಹಾಗೂ ಬಿಜೆಪಿಯನ್ನು ಮಿತ್ರಪಕ್ಷ ಶಿವಸೇನೆ ಚುಚ್ಚಿದೆ. ``ಮೋದಿ ಅವರು ಹೋದಲ್ಲೆಲ್ಲ ಮೋದಿ, ಮೋದಿ, ಮೋದಿ ಎಂಬ ಘೋಷಣೆ ಮೊಳಗುತ್ತದೆ. ಅವರು ಬಹಳ ಜನಪ್ರಿಯರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ನೆಹರೂ ಹಾಗೂ ಇಂದಿರಾಗಾಂಧಿ ಅವರು ಸಾಮಾಜಿಕ ತಾಣಗಳೇ ಇಲ್ಲದ ಸಮಯದಲ್ಲೂ ಇದೇ ರೀತಿಯ ಜನಪ್ರಿಯತೆ ಹೊಂದಿದ್ದರು'' ಎಂದು ಶಿವಸೇನೆ ಮುಖವಾಣಿ ಸಾಮಾ್ನ ಸಂಪಾದಕೀಯದಲ್ಲಿ ಹೇಳಲಾಗಿದೆ.
ಜತೆಗೆ, ``ಮೋದಿ ಎಷ್ಟೇ ಖ್ಯಾತಿ ಗಳಿಸಿದರೂ ಭಾರತದ ಆರ್ಥಿಕ ಪ್ರಗತಿಗೆ ಅಡಿಪಾಯ ಹಾಕಿದ್ದು ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಎಂಬುದನ್ನು ನಾವು ಮರೆಯಬಾರದು. ದೇಶವು ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ, ಅಭಿವೃದ್ಧಿಯ ಪಥ ತೋರಿಸಿದವರು ರಾವ್-ಸಿಂಗ್. ದೂರಸಂಪರ್ಕ, ಪ್ರಸಾರದಲ್ಲಿ ಕ್ರಾಂತಿ ಉಂಟಾಗಿದ್ದು ಇಂದಿರಾರ ಆಡಳಿತದಲ್ಲಿ. ನಂತರ ರಾಜೀವ್ ಗಾಂಧಿ ಅದನ್ನು ಮುಂದುವರಿಸಿಕೊಂಡು ಹೋಗಿ ಪ್ರತಿ ಗ್ರಾಮಗಳಿಗೂ ಫೋನ್ ಸೌಲಭ್ಯ ಸಿಗುವಂತೆ ಮಾಡಿದರು'' ಎಂದೂ ಶಿವಸೇನೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


