ತಮಿಳ್ನಾಡಿಗೆ ಬರಲಿದೆ 'ಅಮ್ಮ ಮೊಬೈಲ್ ಫೋನ್'
ಮಹಿಳೆಯದ ಸ್ವ ಸಹಾಯ ಸಂಘಗಳಿಗೆ ತರಬೇತಿ ನೀಡುವವರಿಗೆ ಅಮ್ಮ ಮೊಬೈಲ್ ಫೋನ್‌ಗಳನ್ನು ವಿತರಣೆ ಮಾಡುವುದಾಗಿ ತಮಿಳ್ನಾಡು...

Published On :
ಚೆನ್ನೈ: ಮಹಿಳೆಯದ ಸ್ವ ಸಹಾಯ ಸಂಘಗಳಿಗೆ ತರಬೇತಿ ನೀಡುವವರಿಗೆ ಅಮ್ಮ ಮೊಬೈಲ್ ಫೋನ್‌ಗಳನ್ನು ವಿತರಣೆ ಮಾಡುವುದಾಗಿ ತಮಿಳ್ನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಹೇಳಿದ್ದಾರೆ. ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ಈ ವಿಷಯವನ್ನು ಘೋಷಣೆ ಮಾಡಿದ ಜಯಲಲಿತಾ, ಮೊದಲ ಹಂತದಲ್ಲಿ ರು. 15 ಕೋಟಿ ವೆಚ್ಚದಲ್ಲಿ 20,000 ಮೊಬೈಲ್ ಫೋನ್ ಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಮಹಿಳಾ ಸ್ವ ಸಹಾಯ ಸಂಘದ ತರಬೇತಿದಾರರಿಗೆ ಸದಸ್ಯರ ಸದಸ್ಯತ್ವದ ಮಾಹಿತಿ, ಉಳಿತಾಯ, ಸಾಲ ಮತ್ತು ಪರಿಹಾರಗಳ ಬಗ್ಗೆ ಮಾಹಿತಿಗಳನ್ನು ಬಹು ಜಾಗರೂಕತೆಯಿಂದ ಇಡಬೇಕಾಗುತ್ತದೆ. ಇದಕ್ಕೆಲ್ಲ ಸಹಾಯವಾಗುವಂತೆ ತಮಿಳ್ನಾಡಿನ ಸರ್ಕಾರವೇ ಸಿದ್ಧಪಡಿಸಿದ ಸಾಫ್ಟ್‌ವೇರ್ ಈ ಮೊಬೈಲ್‌ನಲ್ಲಿದೆ.
ಅಮ್ಮಾ ಸಿಮೆಂಟ್, ಅಮ್ಮಾ ಮಿನರಲ್ ವಾಟರ್, ಅಮ್ಮಾ ಕ್ಯಾಂಟೀನ್ ಹೀಗೆ ಮೊದಲಾದ ಅಮ್ಮಾ ಯೋಜನೆಗಳ ನಂತರ ಅಮ್ಮಾ ಮೊಬೈಲ್ ಫೋನ್ ಜನರ ಕೈಗೆಟುಕಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tamil NaduJ Jayalalithaaಜೆ. ಜಯಲಲಿತಾAmma mobile phoneself-help groupಅಮ್ಮಾ ಮೊಬೈಲ್ ಫೋನ್ಸ್ವ ಸಹಾಯ ಸಂಘತಮಿಳ್ನಾಡು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


