ದೇಶ

ಎಲ್‍ಒಸಿಯಲ್ಲಿ ಗೋಡೆ ಕಟ್ಟಲು ಭಾರತ ಯತ್ನ: ಪಾಕ್

ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹುಳಿ ಹಿಂಡುವ ಮತ್ತೊಂದು ಪ್ರಯತ್ನವನ್ನು ಪಾಕಿಸ್ತಾನ ಮಾಡಿದೆ. ಭಾರತವು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಬೃಹತ್ ಗೋಡೆಯೊಂದನ್ನು ನಿರ್ಮಿಸುತ್ತಿದೆ ಎಂದು ಪಾಕ್ ಆರೋಪಿಸಿದೆ.

ಎಲ್‍ಒಸಿಯಲ್ಲಿ ಗೋಡೆ ಕಟ್ಟಲು ಭಾರತ ಯತ್ನ: ಪಾಕ್
ವಿಶ್ವಸಂಸ್ಥೆ ಮತ್ತು ಎಲ್ ಒಸಿ (ಸಂಗ್ರಹ ಚಿತ್ರ)
Published On :

ವಿಶ್ವಸಂಸ್ಥೆ: ಭಾರತಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹುಳಿ ಹಿಂಡುವ ಮತ್ತೊಂದು ಪ್ರಯತ್ನವನ್ನು ಪಾಕಿಸ್ತಾನ ಮಾಡಿದೆ. ಭಾರತವು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಬೃಹತ್ ಗೋಡೆಯೊಂದನ್ನು ನಿರ್ಮಿಸುತ್ತಿದೆ ಎಂದು ಪಾಕ್ ಆರೋಪಿಸಿದೆ.

ಈ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದಿರುವ ವಿಶ್ವಸಂಸ್ಥೆಯಲ್ಲಿರುವ ಪಾಕಿಸ್ತಾನ ರಾಯಭಾರಿ ಮಲೀಹಾ ಲೋಧಿ, ``ಭಾರತವು ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕಿಸ್ತಾನದ  ನಡುವಿನ 197 ಕಿ.ಮೀ.ನ ಎಲ್‍ಒಸಿಯುದ್ದಕ್ಕೂ 10 ಮೀಟರ್ ಎತ್ತರ ಮತ್ತು 135 ಅಡಿ ಅಗಲದ ಗೋಡೆ ನಿರ್ಮಿಸಲು ಮುಂದಾಗಿದೆ'' ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯ, ``ಇದಕ್ಕೆ ನಾವು ಸೂಕ್ತ ಸಮಯದಲ್ಲಿ ಉತ್ತರಿಸುತ್ತೇವೆ'' ಎಂದಿದೆ. ಇದೇವೇಳೆ, ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕ್ ಕಾಶ್ಮೀರ ವಿಚಾರ ಪ್ರಸ್ತಾಪಿಸಲು ಪ್ರಯತ್ನಿಸಿದರೆ ತಕ್ಕ  ಉತ್ತರ ನೀಡಲಾಗುವುದು ಎಂದು ಪಾಕ್‍ಗೆ ಭಾರತ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದ ಪತ್ರಕ್ಕೆ ವಿಶ್ವಸಂಸ್ಥೆ ಏನಾದರೂ ಕ್ರಮ ಕೈಗೊಂಡಿದೆಯೇ ಎನ್ನುವುದು ಮೊದಲ ಪ್ರಶ್ನೆ. ಒಂದು ವೇಳೆ ಕ್ರಮ ತೆಗೆದುಕೊಂಡಿದ್ದೇ ಆದಲ್ಲಿ, ಆಗ ನಾವು ತಕ್ಕ ಪ್ರತಿಕ್ರಿಯೆ ನೀಡುತ್ತೇವೆ.  ಇಲ್ಲದಿದ್ದರೆ, ವಿಶ್ವಸಂಸ್ಥೆಯೇ ಪಾಕ್ ಪತ್ರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ದೃಢವಾಗುತ್ತದೆ.
-ವಿಕಾಸ್ ಸ್ವರೂಪ್,  ವಿದೇಶಾಂಗ ಇಲಾಖೆ ವಕ್ತಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.