ದೇಶ

ಬಿಹಾರ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರ: ಪಕ್ಷದಲ್ಲಿ ಭುಗಿಲೆದ್ದ ಆಂತರಿಕ ಭಿನ್ನಮತ

ಟಿಕೆಟ್‌ ಹಂಚಿಕೆ ವಿಷಯವಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಕ್ರಿಮಿನಲ್‌ಗಳಿಗೆ ಪಕ್ಷ ಟಿಕೆಟ್‌ ಮಾರಾಟ ಮಾಡುತ್ತಿದೆ ಎಂದು ....

ಬಿಹಾರ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರ: ಪಕ್ಷದಲ್ಲಿ ಭುಗಿಲೆದ್ದ ಆಂತರಿಕ ಭಿನ್ನಮತ
ಆರ್.ಕೆ ಸಿಂಗ್
Published On :

ಪಾಟ್ನಾ:  ಟಿಕೆಟ್‌ ಹಂಚಿಕೆ ವಿಷಯವಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಕ್ರಿಮಿನಲ್‌ಗಳಿಗೆ ಪಕ್ಷ ಟಿಕೆಟ್‌ ಮಾರಾಟ ಮಾಡುತ್ತಿದೆ ಎಂದು ಬಿಹಾರದ ಸಂಸದ ಆರ್.ಕೆ. ಸಿಂಗ್‌ ಆರೋಪಿಸಿದ್ದಾರೆ.

'ಜನಪ್ರಿಯತೆಗಳಿಸಿರುವ ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಅಪರಾಧ ಹಿನ್ನೆಲೆಯವರಿಗೆ ಟಿಕೆಟ್‌ ಹಂಚಿಕೆ ಮಾಡಲಾಗಿದೆ. ಇಂಥ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಸಿಡಿದೇಳುವುದು ಸಹಜ,'ಎಂದು ಸಿಂಗ್‌ ಹೇಳಿದ್ದಾರೆ.

'ಕೆಟ್ಟ ರಾಜಕೀಯದಿಂದಾಗಿ ಬಿಹಾರದಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದೆ. ಆರ್‌ಜೆಡಿ ಹಾಗೂ ಜೆಡಿಯುದಿಂದ ಜಂಗಲ್‌ ರಾಜ್‌ ಪರಿಸ್ಥಿತಿ ಉಂಟಾಗಿದೆ ಎನ್ನುವ ಬಿಜೆಪಿ, ಕುಖ್ಯಾತರಿಗೆ ಟಿಕೆಟ್ ನೀಡುವ ಮೂಲಕ ನಿತೀಶ್‌-ಲಾಲು ಜೋಡಿಗಿಂತ ತಾನು ಬೇರೆ ಅಲ್ಲ ಎಂದು ತೋರಿಸಿದೆ,' ಎಂದು ಅವರು ಕಿಡಿಕಾರಿದ್ದಾರೆ.

'ಈ ವಿಷಯವನ್ನು ಪಕ್ಷದ ಹಿರಿಯ ನಾಯಕ ಸುಶೀಲ್‌ ಮೋದಿ ಅವರ ಗಮನಕ್ಕೆ ತಂದಿದ್ದೇನೆ. ಕ್ರಿಮಿನಲ್‌ಗಳಿಗೆ ಟಿಕೆಟ್‌ ನೀಡಿರುವ ಬಗ್ಗೆ ಪಕ್ಷ ಸಮಜಾಯಿಷಿ ನೀಡಬೇಕು,' ಎಂದು ಅವರು ಆಗ್ರಹಿಸಿದ್ದಾರೆ. .

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.