80 ನಕ್ಸಲರು ಒಡಿಸ್ಸಾ ಪೊಲೀಸರಿಗೆ ಶರಣು
80 ಮಾವೋವಾದಿಗಳು ಒಡಿಸ್ಸಾ ಪೊಲೀಸರಿಗೆ ಶರಣಾಗಿದ್ದಾರೆ. ಈ 80 ನಕ್ಸಲರು ಸಹಾನುಭೂತಿ ಆಧಾರದ ಮೇಲೆ ಒಡಿಸ್ಸಾದ ಮಾಲ್ಕನಗಿರಿ ಜಿಲ್ಲೆಯಲ್ಲಿ ...

ಭುವನೇಶ್ವರ: 80 ಮಾವೋವಾದಿಗಳು ಒಡಿಸ್ಸಾ ಪೊಲೀಸರಿಗೆ ಶರಣಾಗಿದ್ದಾರೆ. ಈ 80 ನಕ್ಸಲರು ಸಹಾನುಭೂತಿ ಆಧಾರದ ಮೇಲೆ ಒಡಿಸ್ಸಾದ ಮಾಲ್ಕನಗಿರಿ ಜಿಲ್ಲೆಯಲ್ಲಿ ಶರಣಾಗಿದ್ದಾರೆ.
ಶರಣಾದ ಎಲ್ಲಾ ನಕ್ಸಲರು ಮತ್ತವರ ಬೆಂಬಲಿಗರು ಒಡಿಸ್ಸಾದ ಬದಲಿಗುಡ ಗ್ರಾಮದವರು ಎಂದು ಮಾಲ್ಕನಗಿರಿ ಎಸ್ ಪಿ ಮಿತ್ರಬಾನು ತಿಳಿಸಿದ್ದಾರೆ. ಕಳೆದ ತಿಂಗಳು ಸುಮಾರು 800 ಕ್ಕೂ ಹೆಚ್ಚು ಮಾವೋವಾದಿಗಳು ಪೊಲೀಸರಿಗೆ ಶರಣಾಗಿದ್ದರು.
ಶರಣಾಗತಿ ಬಯಸಿದ್ದ ನಕ್ಸಲರು ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಪೊಲೀಸರು ತಮ್ಮ ವಿರುದ್ಧ ಅನವಶ್ಯಕ ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಜೊತೆಗೆ ಶರಣಾಗುತವಂತೆ ಒತ್ತಾಯಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


