ದೇಶ

ಡೆಂಘೀಗೆ ಗಿಡಮೂಲಿಕೆಯೇ ಮದ್ದು ಎಂಬುದಕ್ಕೆ ವೈಜ್ಞಾನಿಕ ಆಧಾರಗಳೇನೂ ಇಲ್ಲ

ಅಮೃತಬಳ್ಳಿ, ಲೋಳೆಸರ ಮತ್ತು ಪಪ್ಪಾಯ ಎಲೆ ಡೆಂಘೀ ಜ್ವರವನ್ನು ಗುಣಪಡಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳು ಅಲ್ಲ ಎಂದು ಏಮ್ಸ್...

ಡೆಂಘೀಗೆ ಗಿಡಮೂಲಿಕೆಯೇ ಮದ್ದು ಎಂಬುದಕ್ಕೆ ವೈಜ್ಞಾನಿಕ ಆಧಾರಗಳೇನೂ ಇಲ್ಲ
ಬಾಬಾ ರಾಮ್ ದೇವ್
Published On :
ನವದೆಹಲಿ: ಅಮೃತಬಳ್ಳಿ, ಲೋಳೆಸರ ಮತ್ತು ಪಪ್ಪಾಯ ಎಲೆಗಳನ್ನು ಡೆಂಘೀ ಔಷಧಿಯನ್ನಾಗಿ ಬಳಸಬಹುದು ಎಂದು ಯೋಗ ಗುರು ಬಾಬಾ ರಾಮ್‌ದೇವ್ ಅವರು ಹೇಳಿದ್ದಾರೆ. ಆದರೆ ಈ ಗಿಡಮೂಲಿಕೆಗಳು ಡೆಂಘೀ ಜ್ವರವನ್ನು ಗುಣಪಡಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳು ಅಲ್ಲ ಎಂದು  ಏಮ್ಸ್ (ಎಐಐಎಂಎಸ್) ತಜ್ಞರು ಹೇಳಿದ್ದಾರೆ.
ಡೆಂಘೀ ಜ್ವರಕ್ಕೆ ಯಾವುದೇ ಗಿಡಮೂಲಿಕೆಗಳನ್ನು ಬಳಸಬಾರದು. ಗಿಡಮೂಲಿಕೆಗಳಿಂದ ರೋಗ ಗುಣವಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಆದ್ದರಿಂದ ಡೆಂಘೀ ಪೀಡಿತರು ಲೋಳೆಸರ, ಪಪ್ಪಾಯ ಎಲೆ ಮತ್ತು ಆಡಿನ ಹಾಲುಗಳನ್ನು ಬಳಸಿ ಎಂದು ನಾವು ಶಿಫಾರಸು ಮಾಡುವುದಿಲ್ಲ. ವೈಜ್ಞಾನಿಕ ಆಧಾರಗಳಿಲ್ಲದೆ ಯಾವುದೇ ಮದ್ದು ಸೇವಿಸಲು ಮುಂದಾಗಬೇಡಿ.  ಕೆಲವೊಂದು ಹಣ್ಣುಗಳು, ಗಿಡಮೂಲಿಕೆಗಳು ಡೆಂಘೀಯನ್ನು ಗುಣಪಡಿಸುತ್ತವೆ ಎಂಬುದು ಇಲ್ಲಿಯವರೆಗೆ ವೈಜ್ಞಾನಿಕವಾಗಿ ಸಾಬೀತು ಪಡಿಸಿಲ್ಲ ಎಂದು ಏಮ್ಸ್ ನ ಮೆಡಿಸಿನ್ ವಿಭಾಗದ ಮುಖ್ಯಸ್ಥ ಎಸ್.ಕೆ ಶರ್ಮಾ ಹೇಳಿದ್ದಾರೆ.
ಆದಾಗ್ಯೂ, ಈ ಎಲ್ಲ ಗಿಡಮೂಲಿಕೆಗಳು ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಹೆಚ್ಚಾಗುವಂತೆ ಮಾಡುತ್ತವೆ ಎಂದು ಹೇಳಿದರೂ, ಇವುಗಳು ಡೆಂಘೀ ಗುಣಪಡಿಸುತ್ತವೆ ಎಂದು ಹೇಳುವಂತಿಲ್ಲ ಎಂದು ಶರ್ಮಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.