ದೇಶ

ಪುಣ್ಯಕ್ಷೇತ್ರದಲ್ಲಿ ನೈತಿಕ ಪೊಲೀಸ್‍ಗಿರಿ..!

ಮಂಗಳೂರಿನ ನೈತಿಕ ಪೊಲೀಸ್‍ಗಿರಿ ಇನ್ನೂ ನೆನಪಲ್ಲಿರುವಾಗಲೇ, ಕಳೆದ ವಾರದ ಉತ್ತರಾ ಖಂಡದ ಅಮಾನುಷ ಕೃತ್ಯ ಕಂಡು ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ, ನೈತಿಕ ಪೊಲೀಸ್ ಗಿರಿಯ ಅಟ್ಟಹಾಸ ಉತ್ತರ ಭಾರತಕ್ಕೂ ತಟ್ಟಿದೆ....

ಪುಣ್ಯಕ್ಷೇತ್ರದಲ್ಲಿ ನೈತಿಕ ಪೊಲೀಸ್‍ಗಿರಿ..!
ಹಲ್ಲೆಗೊಳಗಾದ ಜೋಡಿ
Published On :

ಡೆಹ್ರಾಡೂನ್: ಮಂಗಳೂರಿನ ನೈತಿಕ ಪೊಲೀಸ್‍ಗಿರಿ ಇನ್ನೂ ನೆನಪಲ್ಲಿರುವಾಗಲೇ, ಕಳೆದ ವಾರದ ಉತ್ತರಾ ಖಂಡದ ಅಮಾನುಷ ಕೃತ್ಯ ಕಂಡು ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ, ನೈತಿಕ ಪೊಲೀಸ್ ಗಿರಿಯ ಅಟ್ಟಹಾಸ ಉತ್ತರ ಭಾರತಕ್ಕೂ ತಟ್ಟಿದೆ.

ಪವಿತ್ರಕ್ಷೇತ್ರಗಳಲ್ಲಿ ಗಂಡು ಹೆಣ್ಣು ಅಕ್ರಮ ಸಂಬಂಧ ನಡೆಸಿದರೆ ಅಲ್ಲಿನ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ, ದೈಹಿಕ ಮಿಲನ ದಲ್ಲಿ ತೊಡಗಿದರೆ ಧಾರ್ಮಿಕ ಪ್ರಖ್ಯಾತಿಗೆ ಕುಂದುಬರುತ್ತದೆಂಬ ಕಾರಣ ನೀಡಿ, ಅದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎನ್ನುತ್ತಾ 20 ಯುವಕರ ತಂಡ ನೈತಿಕ ಪೊಲೀಸ್ ಗಿರಿ ನಡೆಸಿದೆ. ಇವರ ಮಾರಲ್ ಪೊಲೀಸಿಂಗ್‍ಗೆ ಗುರಿಯಾದದ್ದು ಒಂದು ಅವಿವಾಹಿತ  ಜೋಡಿ. ಹರಿದ್ವಾರದ ಪಿರನ್ ಕಲಿಯಾರ್ ಪಟ್ಟಣದ ಅತಿಥಿಗೃಹದಲ್ಲಿ ತಂಗಿದ್ದ ಪ್ರೇಮಿಗಳಿಬ್ಬರನ್ನು ಅಮಾನವೀಯವಾಗಿ ಎಳೆತಂದ ಯುವಕರು ನಡುರಸ್ತೆಯಲ್ಲೇ ಅವರಿಬ್ಬರನ್ನೂ ಥಳಿಸಿ  ಸಾರ್ವಜನಿಕವಾಗಿ ಅಪಮಾನವೆಸಗಿದ್ದಾರೆ. ಅಚ್ಚರಿಯೆಂದರೆ ಈ ಘಟನೆ ನಡೆದದ್ದು ಭಾನುವಾರ.

ಮಾಧ್ಯಮಗಳಲ್ಲಿ ಸುದ್ದಿಯಾದಲ್ಲಿ ಇನ್ನಷ್ಟು ಅಪಮಾನವಾಗುತ್ತದೆಂದು ಹೆದರಿದ ಜೋಡಿ ಇದನ್ನು ಎಲ್ಲರಿಂದ ಮುಚ್ಚಿಟ್ಟಿದೆ. ಆದರೆ ಪ್ರತ್ಯಕ್ಷದರ್ಶಿಗಳು ಚಿತ್ರಿಸಿದ ವಿಡಿಯೋ ತುಣುಕು ವೈರಲ್  ಆಗಿದ್ದರಿಂದಾಗಿ ಈ ಸುದ್ದಿ ಪೊಲೀಸರಿಗೂ ತಲುಪಿದೆ. ಒತ್ತಡಕ್ಕೆ ಮಣಿದ ಪೊಲೀಸರು ವಿಡಿಯೋದಲ್ಲಿ ಕಂಡ 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಹಲ್ಲೆಗೊಳಗಾದ ಜೋಡಿ  ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ.

ವೈರಲ್ ಆದ ವಿಡಿಯೋ
ಕಳೆದ 16ರಂದು ನಡೆದ ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸ್‍ಆ್ಯಪ್ ಗಳಲ್ಲಿ ಶೇರ್ ಆದ ಈ ವೀಡಿಂಯೊ ಈಗ ಪೊಲೀಸರ ಕೈಸೇರಿದೆ.

ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ನಮಗೆ ಈವರೆಗೆ ಯಾರೂ ದೂರು ಸಲ್ಲಿಸಲಿಲ್ಲ. ಈಗ ವಿಡಿಯೋ ತುಣುಕನ್ನೇ ಮುಂದಿಟ್ಟುಕೊಂಡು ಎಫ್ ಐಆರ್ ದಾಖಲಿಸಿದ್ದೇವೆ.
-ಸ್ವೀಟಿ ಅಗರ್‍ವಾಲ್ ಹರಿದ್ವಾರದ ಎಸ್ಪಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.