ನೇತಾಜಿ ರಹಸ್ಯ ಕಡತ ಬಹಿರಂಗ: ಮಮತಾಗೆ ಏನು ಲಾಭ?
ನೇತಾಜಿ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಬೇಕೆ ಎನ್ನುವ ಬೇಡಿಕೆ ದಶಕಗಳಿಂದ ಸರ್ಕಾರಗಳ ಮುಂದಿತ್ತು. ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಂಥ ಪ್ರಸ್ತಾಪವನ್ನು ತಳ್ಳಿಹಾಕುತ್ತಲೇ ಬಂದಿತ್ತು.

ಕೊಲ್ಕತಾ: ನೇತಾಜಿ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಬೇಕೆ ಎನ್ನುವ ಬೇಡಿಕೆ ದಶಕಗಳಿಂದ ಸರ್ಕಾರ ಗಳ ಮುಂದಿತ್ತು. ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಂಥ ಪ್ರಸ್ತಾಪವನ್ನು ತಳ್ಳಿಹಾಕುತ್ತಲೇ ಬಂದಿತ್ತು.
ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಕೂಡ ಹೊರದೇಶಗ ಳೊಂದಿಗಿನ ಬಾಂಧವ್ಯ ಕೆಡಬಹುದೆ ನ್ನುವ ಕಾರಣ ಕೊಟ್ಟು ಕಡತ ಬಹಿರಂಗ ಕಾರ್ಯವನ್ನು ಮುಂದೂ ಕುತ್ತಲೇ ಬಂದಿದೆ. ಆದರೆ, ಮಮತಾ ಬ್ಯಾನರ್ಜಿ ಮಾತ್ರ ಆ ರಹಸ್ಯ ಕಡತಗಳನ್ನು ಬಹಿರಂಗ ಮಾಡುವ ಮೂಲಕ ಈವರೆಗೆ ಆ ಕಡತಗಳನ್ನು ಮುಚ್ಚಿಟ್ಟಿದ್ದ ಕಾಂಗ್ರೆಸ್ ಗೆ ಮುಖ ಭಂಗವುಂಟು ಮಾಡಿದ್ದಾರೆ. ಜತೆಗೆ, ಕೋಲ್ಕತಾದಲ್ಲಿರುವ ನೇತಾಜಿ ಬೆಂಬಲಿಗರ ಮನಗೆಲ್ಲುವಲ್ಲೂ ಅವರು ಯಶಸ್ವಿಯಾಗಿದ್ದಾರೆ.
ಜತೆಗೆ, ಪರೋಕ್ಷ ವಾಗಿ ನೇತಾಜಿ ಸಾವಿನ ರಹಸ್ಯ ಬಯಲು ಮಾಡುವುದಾಗಿ ಹೇಳುತ್ತಿದ್ದ ಬಿಜೆಪಿ ಕಾಲೆಳೆಯುವಲ್ಲೂ ಅವರು ಈ ಮೂಲಕ ಯಶಸ್ವಿಯಾಗಿದ್ದಾರೆ. ನೀವು ಪಾರದರ್ಶಕತೆ ಕುರಿತು ಮಾತನಾಡುತ್ತೀರಿ. ನಾನು ಆ ಕೆಲಸವನ್ನು ನಿಮಗಿಂತ ಮೊದಲೇ ಮಾಡಿ ತೋರಿಸಿದ್ದೇನೆ. ಇನ್ನು ನಿಮ್ಮ ಸರದಿ ಎಂದು ಸವಾಲು ಹಾಕಿದ್ದಾರೆ.
ನೇತಾಜಿ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡಬಾರದು. ಮಮತಾ ಸರ್ಕಾರ ಬಹಿರಂಗಗೊಳಿಸಿದ ರಹಸ್ಯ ಕಡತಗಳಿಂದ ಅಂತಾರಾಷ್ಟ್ರೀಯ ಪರಿಣಾಮವೇನೂ ಆಗದು. ಆದರೆ, ಕೇಂದ್ರದ ಬಳಿ ಇರುವ ಕಡತ ಬಹಿರಂಗವಾದರೆ ವಿದೇಶಗಳೊಂದಿಗೆ ಹೊಂದಿರುವ ಸಂಬಂಧದ ಮೇಲೆ ಅಡ್ಡಪರಿಣಾಮ ಉಂಟಾಗಲಿದೆ.
-ಸಿದ್ದಾರ್ಥನಾಥ್ ಸಿಂಗ್
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಇದೊಂದು ಸರಿಯಾದ ಹೆಜ್ಜೆ. 70 ವರ್ಷಗಳಷ್ಟು ಸುದೀರ್ಘ ವರ್ಷಕಡತಗಳನ್ನು ಮುಚ್ಚಿಟ್ಟಿರುವುದು ದೇಶಕ್ಕೆ ಮಾಡಿದ ದ್ರೋಹ. ಇನ್ನು ತನ್ನ ಬಳಿ ಇರುವ 130 ರಹಸ್ಯ ಕಡತಗಳನ್ನು ಬಹಿರಂಗ ಮಾಡುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಈ ಮೂಲಕ ತಪ್ಪಿತಸ್ಥ ನಾಯಕರ ಬಣ್ಣ ಬಯಲು ಮಾಡಬೇಕಿದೆ.
-ಚಂದ್ರಬೋಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


