ನೋಟಾಗೂ ಸಿಕ್ಕಿತೊಂದು ಚಿಹ್ನೆ
ನೋಟಾ ಆಯ್ಕೆಗೂ ಈಗ ಹೊಸ ಚಿಹ್ನೆಯೊಂದು ಸಿಕ್ಕಿದೆ. ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ನೋಟಾ (ನನ್ ಆಫ್ ದಿ ಎಬವ್)...

Published On :
ನವದೆಹಲಿ: ನೋಟಾ ಆಯ್ಕೆಗೂ ಈಗ ಹೊಸ ಚಿಹ್ನೆಯೊಂದು ಸಿಕ್ಕಿದೆ. ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ನೋಟಾ (ನನ್ ಆಫ್ ದಿ ಎಬವ್)ಗೆ ಚಿಹ್ನೆಯನ್ನು ನೀಡಿದೆ. ಈ ಚಿಹ್ನೆಯನ್ನು ಮತ ಪತ್ರಗಳು ಹಾಗೂ ವಿದ್ಯುನ್ಮಾನ ಮತಯಂತ್ರಗಳ ಮೇಲೆ ಅಭ್ಯರ್ಥಿಗಳ ಚಿಹ್ನೆಯಷ್ಟೇ ಪ್ರಧಾನವಾಗಿ ಪ್ರದರ್ಶಿಸಲಾಗುತ್ತದೆ. ಸುಪ್ರೀಂ ಕೋರ್ಟ್ 2013ರ ಅಕ್ಟೋಬರ್ 27 ರಂದು ನೀಡಿದ ಆದೇಶದಂತೆ ಎಲ್ಲ ಚುನಾವಣೆಗಳಲ್ಲೂ ಈಗ ನೋಟಾ ಐಚ್ಛಿಕವಾಗಿಡಲಾಗಿದೆ. ಚುನಾವಣಾ ಕಣದಲ್ಲಿ ಇರುವ ಯಾವೊಬ್ಬ ಅಭ್ಯರ್ಥಿಗೂ ಮತ ಹಾಕಲು ಇಚ್ಛಿಸದ ಮತದಾರರು ನೋಟಾ- ``ಮೇಲಿನ ಯಾರಿಗೂ (ಮತ) ಇಲ್ಲ'' ಎಂದು ತಮ್ಮ ಚುನಾವಣಾ ಹಕ್ಕನ್ನು ಚಲಾಯಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


