ದೇಶ

ದೆಹಲಿ, ಮುಂಬೈ ವಿಶ್ವದ ಅತಿ ಕಡಿಮೆ ವೆಚ್ಚದ ನಗರಗಳು

ಲಂಡನ್ ಹಾಗೂ ವಿಶ್ವದ ಇತರೆ ನಗರಗಳಿಗೆ ಹೋಲಿಕೆ ಮಾಡಿದರೆ ದೆಹಲಿ ಹಾಗೂ ಮುಂಬೈ ವಾಸಿಸಲು ವಿಶ್ವದಲ್ಲೇ ಅತಿ ಕಡಿಮೆ ಖರ್ಚಿನ ನಗರಗಳು...

ದೆಹಲಿ, ಮುಂಬೈ ವಿಶ್ವದ ಅತಿ ಕಡಿಮೆ ವೆಚ್ಚದ ನಗರಗಳು
ದೆಹಲಿ- ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಲಂಡನ್ ಹಾಗೂ ವಿಶ್ವದ ಇತರೆ ನಗರಗಳಿಗೆ ಹೋಲಿಕೆ ಮಾಡಿದರೆ ದೆಹಲಿ ಹಾಗೂ ಮುಂಬೈ ವಾಸಿಸಲು ವಿಶ್ವದಲ್ಲೇ ಅತಿ ಕಡಿಮೆ ಖರ್ಚಿನ ನಗರಗಳು ಎಂದು ಸ್ವಿಸ್ ಬ್ಯಾಂಕ್ ಯುಬಿಎಸ್ ವರದಿ ಹೇಳಿದೆ.

ವಸತಿ, ಸಾರಿಗೆ, ಆಹಾರ, ವಸ್ತ್ರ, ಮನೆ ಬಳಕೆ ವಸ್ತುಗಳು ಹಾಗೂ ಮನರಂಜನೆಯನ್ನು ಆಧಾರವಾಗಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿದ್ದು, ಅತಿ ವೆಚ್ಚದಾಯಕ ನಗರಗಳ ಪಟ್ಟಿಯಲ್ಲಿ ಜ್ಯೂರಿಚ್ ಮೊದಲ ಸ್ಥಾನದಲ್ಲಿದ್ದು, ಜೆನೆವಾ ಹಾಗೂ ನ್ಯೂಯಾರ್ಕ್ ನಂತರದ ಸ್ಥಾನದಲ್ಲಿವೆ. ಇನ್ನು ಬ್ರಿಟಿಷ್ ರಾಜಧಾನಿ ಲಂಡನ್ ಐದನೇ ಸ್ಥಾನ ಪಡೆದಿದೆ. ಈ ನಗರಗಳಲ್ಲಿ ಮನೆ ಬಾಡಿಗೆ ಸೇರಿದಂತೆ ಜೀವನ ವೆಚ್ಚ ಅತ್ಯಂತ ದುಬಾರಿ ಎಂದು ವರದಿ ತಿಳಿಸಿದೆ.

ಜ್ಯೂರಿಚ್ ತೆರಿಗೆಗಳ್ಳರ ಸ್ವರ್ಗವಾಗಿರುವ ಕಾರಣ ಈ ನಗರಗಳಲ್ಲಿ ಜೀವನ ವೆಚ್ಚ ವಿಶ್ವದಲ್ಲೇ ದುಬಾರಿಯಾಗಿ ಪರಿಣಮಿಸಿದೆ.

ಇನ್ನು ಅತ್ಯಂತ ಕಡಿಮೆ ಖರ್ಚಿನ ನಗರಗಳ ಪಟ್ಟಿಯಲ್ಲಿ, ಬಲ್ಲೇರಿಯಾದ ಸೊಫಿಯಾ ಹಾಗೂ ಭಾರತದ ದೆಹಲಿ ಮತ್ತು ಮುಂಬೈ ನಗರಗಳು ಸ್ಥಾನ ಪಡೆದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.