ದೇಶ

ರು. 4 ಲಕ್ಷ ಬೇನಾಮಿ ಹಣದೊಂದಿಗೆ ಬಿಹಾರ ಮಾಜಿ ಸಿಎಂ ಪುತ್ರ ಸೆರೆ

ರು.4 ಲಕ್ಷ ಬೇನಾಮಿ ಹಣ ಹೊಂದಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರ ಪುತ್ರ ಶುಭಂ ಮಾಂಜಿ ಅವರನ್ನು ಪೊಲೀಸರು ಭಾನುವಾರ...

ರು. 4 ಲಕ್ಷ ಬೇನಾಮಿ ಹಣದೊಂದಿಗೆ ಬಿಹಾರ ಮಾಜಿ ಸಿಎಂ ಪುತ್ರ ಸೆರೆ
ಜಿತನ್ ರಾಮ್ ಮಾಂಜಿ
Published On :

ಪಾಟ್ನಾ: ರು.4 ಲಕ್ಷ ಬೇನಾಮಿ ಹಣ ಹೊಂದಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರ ಪುತ್ರ ಶುಭಂ ಮಾಂಜಿ ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಶುಭಂ ಮಾಂಜಿ ಕಾರಿನಲ್ಲಿ ಬೇನಾಮಿ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಶುಭಂ ಅವರ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದ್ದರು. ಇಲ್ಲಿನ ಜೆಹಾನಾಬಾದ್ ಜಿಲ್ಲೆಯ ಮಖ್‌ದಂಪುರ್ ಬಳಿಯ ಧಾರ್‌ನೈ ಗ್ರಾಮದಲ್ಲಿ ಕಾರು ತಪಾಸಣೆಗೊಳಪಡಿಸಿದ್ದು, ಅದರಲ್ಲಿ ರು. 4,65,000 ಪತ್ತೆಯಾಗಿದೆ.

ಶುಭಂ ಅವರನ್ನು ಮಖ್‌ದಂಪುರ್ ಪೊಲೀಸ್ ಠಾಣೆಗೆ ಒಯ್ಯಲಾಗಿದ್ದು, ಅವರನ್ನೀಗ ವಿಚಾರಣೆಗೊಳಪಡಿಸಲಾಗಿದೆ ಎಂದು ಬಲ್ಲಮೂಲಗಳು ಹೇಳಿವೆ.

ಬಿಹಾರದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದ್ದು, ಬೇನಾಮಿ ಹಣಕ್ಕೂ ಇದಕ್ಕೂ ಏನಾದರೂ ನಂಟು ಇದೆಯೆ? ಎಂಬ ಶಂಕೆ ಇಲ್ಲಿ ವ್ಯಕ್ತಪಡಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.