ದೇಶ

ಹರ್ಯಾಣದಲ್ಲಿ 8 ದಿನಗಳ ಕಾಲ ಗೋಮಾಂಸ ನಿಷೇಧ

ಜೈನರ ಪರ್ಯೂಶನ್ ವ್ರತ ಹಿನ್ನೆಲೆಯಲ್ಲಿ ಎಂಟು ದಿನಗಳ ಕಾಲ ಗೋಮಾಂಸ ಮಾರಾಟ ನಿಷೇಧಿಸಲು ಹರ್ಯಾಣ ಸರ್ಕಾರ ತೀರ್ಮಾನಿಸಿದೆ...

ಹರ್ಯಾಣದಲ್ಲಿ 8 ದಿನಗಳ ಕಾಲ ಗೋಮಾಂಸ ನಿಷೇಧ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಜೈನರ ಪರ್ಯೂಶನ್ ವ್ರತ ಹಿನ್ನೆಲೆಯಲ್ಲಿ ಎಂಟು ದಿನಗಳ ಕಾಲ ಗೋಮಾಂಸ ಮಾರಾಟ ನಿಷೇಧಿಸಲು ಹರ್ಯಾಣ ಸರ್ಕಾರ ತೀರ್ಮಾನಿಸಿದೆ.

ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 18ರ ವರೆಗೆ ಗೋಮಾಂಸ ಮಾರಾಟವನ್ನು ನಿಲ್ಲಿಸಬೇಕೆಂದು ಸರ್ಕಾರ ಹೇಳಿದೆ.

ಇದೀಗ ಗೋಮಾಂಸಕ್ಕೆ ನಿಷೇಧ ಹೇರಿದ ಬಿಜೆಪಿ ಆಡಳಿತಾರೂಢ 5 ನೇ ರಾಜ್ಯವಾಗಿದೆ ಹರ್ಯಾಣ.

ಛತ್ತೀಸ್‌ಗಢ ಸರ್ಕಾರ ಎರಡು ದಿನಗಳ ಕಾಲ ಗೋಮಾಂಸ ನಿಷೇಧಿಸುವಂತೆ ಶುಕ್ರವಾರ ಆಜ್ಞೆ ನೀಡಿತ್ತು. ಜೈನರು ಉಪವಾಸ ಆಚರಿಸುತ್ತಿರುವ ವಾರಗಳಲ್ಲಿ ಗೋವು, ಆಡು ಅಥವಾ ಇನ್ಯಾವುದೇ ಮಾಂಸಗಳನ್ನು ಮಾರುವುದಕ್ಕೆ ಸರ್ಕಾರ ತಡೆಯನ್ನೊಡ್ಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.