ರಾಯಭಾರಿಯಿಂದ ರೇಪ್: ಸೌದಿ ಸಹಕಾರ ಕೇಳಿದ ವಿದೇಶಾಂಗ ಸಚಿವಾಲಯ
ಭಾರತದಲ್ಲಿರುವ ಸೌದಿ ಅರೇಬಿಯಾ ರಾಜ ತಾಂತ್ರಿಕ ಅಧಿಕಾರಿಯ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಗೆ ಸಹಕಾರ ನೀಡುವಂತೆ ವಿದೇಶಾಂಗ ವ್ಯವಹಾರಗಳ...

ನವದೆಹಲಿ: ಭಾರತದಲ್ಲಿರುವ ಸೌದಿ ಅರೇಬಿಯಾ ರಾಜ ತಾಂತ್ರಿಕ ಅಧಿಕಾರಿಯ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಗೆ ಸಹಕಾರ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಸೌದಿ ರಾಯಭಾರಿಗೆ ಕೇಳಿಕೊಂಡಿದೆ.
ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಸೌಧಿ ರಾಯಭಾರಿ ಸೌದ್ ಮೊಹಮ್ಮದ್ ಅಲ್ಸತಿ ಅವರಿಗೆ ದೂರವಾಣಿ ಕರೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಸಹಕಾರ ಕೇಳುತ್ತಿದ್ದಾರೆ ಎಂದಿದೆ.
ವಿದೇಶಾಂಗ ಸಚಿವಾಲಯದ ಶಿಷ್ಟಾಚಾರ ಮುಖ್ಯಸ್ಥೆ ಸೌದಿ ರಾಯಭಾರಿಗೆ ಕರೆ ಮಾಡಿ, ಹರಿಯಾಣ ಪೊಲೀಸರ ಮನವಿಯನ್ನು ತಿಳಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ತಿಳಿಸಿದ್ದಾರೆ.
ನೇಪಾಳದ ಇಬ್ಬರು ಮಹಿಳೆಯರನ್ನು 4 ತಿಂಗಳು ಕೂಡಿ ಹಾಕಿ, ಅತ್ಯಾಚಾರ ಮಾಡಿದ ಆರೋಪದ ಮೇಲೆ ಸೌದಿ ಅಧಿಕಾರಿಯ ವಿರುದ್ಧ ಕೇಸು ದಾಖಲಿಸಲಾಗಿದ್ದು, ಗುರ್‍ಗಾಂವ್ ಪೊಲೀಸರು ಈ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೆ ವಿಸ್ತೃತ ವರದಿ ನೀಡಿದ್ದಾರೆ.
ಮನೆ ಮೇಲೆ ದಾಳಿ: ನೇಪಾಳದ 44 ವರ್ಷ ದ ಮಹಿಳೆ ಮತ್ತು ಆಕೆಯ ಪುತ್ರಿ(20)ಯನ್ನು ರಾಜತಾಂತ್ರಿಕ ಅಧಿಕಾರಿಯು ಗುರ್ ಗಾಂವ್‍ನ ತನ್ನ ಅಪಾರ್ಟ್‍ಮೆಂಟ್‍ನಲ್ಲಿ ಕೂಡಿಹಾಕಿದ್ದನ್ನು ನೋಡಿದ್ದ ಮನೆಕೆಲಸ ದಾಕೆ, ಈ ಬಗ್ಗೆ ಎನ್‍ಜಿಒವೊಂದಕ್ಕೆ ಮಾಹಿತಿ ನೀಡಿದ್ದಳು. ಆ ಸಂಸ್ಥೆಯು ನೇಪಾಳ ರಾಯಭಾರ ಕಚೇರಿಗೆ ಈ ವಿಷಯ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ನೇಪಾಳ ರಾಯಭಾರ ಕಚೇರಿ ಯು ಗುರ್‍ಗಾಂವ್ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿತ್ತು. ಅದರಂತೆ, ಸೋಮವಾರ ರಾತ್ರಿ ಅಧಿಕಾರಿಯ ಅಪಾಟ್ರ್ ಮೆಂಟ್‍ಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಮಹಿಳೆಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದ್ದು, ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳವಾಗಿದ್ದು ದೃಢಪಟ್ಟಿದೆ. ಈ ಮಹಿಳೆಯರನ್ನು 4 ತಿಂಗಳ ಹಿಂದೆ ಮನೆಕೆಲಸಕ್ಕಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಒಂದು ಬಾರಿ ಇವರನ್ನು ಸೌದಿ ಅರೇಬಿಯಾಕ್ಕೂ ಕರೆದೊಯ್ದು ಅತ್ಯಾಚಾರ ಮಾಡಲಾಗಿತ್ತು. ನಂತರ ಭಾರತಕ್ಕೆ ಕರೆತಂದ ಅಧಿಕಾರಿ, ಅಪಾರ್ಟ್‍ಮೆಂಟ್‍ನಲ್ಲಿ ಇವ ರನ್ನು ಕೂಡಿ ಹಾಕಿದ್ದರು. ಅಲ್ಲಿಗೆ ಬರುತ್ತಿದ್ದ ಅತಿಥಿಗಳೂ ಈ ಅಮಾಯಕರ ಮೇಲೆ ಅತ್ಯಾಚಾರವೆಸಗುತ್ತಿದ್ದರು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


