ಮಚಿಲ್ ನಕಲಿ ಎನ್ ಕೌಂಟರ್: ಆರು ಮಂದಿ ಸೇನಾ ಸಿಬ್ಬಂದಿಗೆ ಜೀವಾವಧಿ ಶಿಕ್ಷೆ
2010ರಲ್ಲಿ ಜಮ್ಮು-ಕಾಶ್ಮೀರದ ಮಚಿಲ್ ನಲ್ಲಿ ನಡೆದ ನಕಲಿ ಎನ್ ಕೌಂಟರ್ ನಲ್ಲಿ ಮೂವರು ಯುವಕರನ್ನು ಕೊಂದು ಹಾಕಿದ...

ಜಮ್ಮು: 2010ರಲ್ಲಿ ಜಮ್ಮು-ಕಾಶ್ಮೀರದ ಮಚಿಲ್ ನಲ್ಲಿ ನಡೆದ ನಕಲಿ ಎನ್ ಕೌಂಟರ್ ನಲ್ಲಿ ಮೂವರು ಯುವಕರನ್ನು ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಸೇನಾಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಆರು ಮಂದಿ ಸೇನಾ ಸಿಬ್ಬಂದಿಗಳಾದ ಕರ್ನಲ್ ದಿನೇಶ್ ಪತಾನಿಯಾ, ಕ್ಯಾಪ್ಟೆನ್ ಒಪಿಂದ್ರಾ, ಹವಲ್ದರ್ ದೇವೇಂದರ್ ಕುಮಾರ್, ಲಾನ್ಸ್ ನಾಯಕ್ ಲಕ್ಮಿ, ಲಾನ್ಸೆ ನಾಯಕ್ ಅರುಣ್ ಕುಮಾರ್ ಮತ್ತು ಅಬ್ಬಾಸ್ ಹುಸೇನ್ ಅವರನ್ನು ಅಪರಾಧಿಗಳೆಂದು ಕಳೆದ ನವೆಂಬರ್ ನಲ್ಲಿ ಘೋಷಿಸಲಾಗಿತ್ತು. ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಜಮ್ಮು-ಕಾಶ್ಮೀರದ ಉತ್ತರ ಕಮಾಂಡರ್ ಲೆ.ಕರ್ನಲ್ ಡಿ.ಎಸ್.ಹೂಡಾ ತಿಳಿಸಿದ್ದಾರೆ.
ಎಲ್ಲಾ ಕಾನೂನು ಕ್ರಮಗಳು ಮುಗಿದ ನಂತರ ಆರು ಮಂದಿ ಅಧಿಕಾರಿಗಳನ್ನು ಜೈಲಧಿಕಾರಿಗಳ ಮುಂದೆ ಹಾಜರುಪಡಿಸಲಾಗುವುದು. ಶಿಕ್ಷೆಗೊಳಗಾದವರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


