ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಬಾಬಾ ರಾಮ್ ದೇವ್ ನೂಡಲ್ಸ್
ಯೋಗಗುರು ಬಾಬಾ ರಾಮ್ ದೇವ್ ಸ್ವದೇಶಿ ನ್ಯೂಡಲ್ಸ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಗೋಧಿಯಿಂದ ತಯಾರಿಸಿದ ಪತಂಜಲಿ "ಆಟಾ ನೂಡಲ್ಸ್'...

ಮ್ಯಾಗಿ ನೂಡಲ್ಸ್ ನಲ್ಲಿ ಹಾನಿಕಾರ ಸೀಸದ ಅಂಶ ಇರುವ ಬಗ್ಗೆ ದೇಶಾದ್ಯಂತ ಆಗುತ್ತಿರುವ ಚರ್ಚೆಗಳ ನಡುವೆಯೇ ಯೋಗಗುರು ಬಾಬಾ ರಾಮ್ ದೇವ್ ಸ್ವದೇಶಿ ನ್ಯೂಡಲ್ಸ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಗೋಧಿಯಿಂದ ತಯಾರಿಸಿದ ಪತಂಜಲಿ "ಆಟಾ ನೂಡಲ್ಸ್'ಅನ್ನು ಬಾಬಾ ರಾಮ್‌ದೇವ್ ಹರಿದ್ವಾರದಲ್ಲಿ ಬಿಡುಗಡೆ ಮಾಡಿದ್ದಾರೆ.
ಕೆಲ ದಿನಗಳಲ್ಲೇ ನ್ಯೂಡಲ್ಸ್ ಎಲ್ಲರ ಕೈ ಸೇರಲಿದ್ದೂ ನೂಡಲ್ಸ್ ತಯಾರಿಕೆಗೆ ಮೈದಾ ಹಿಟ್ಟನ್ನು ಬಳಸಿಲ್ಲ. ಸಂಪೂರ್ಣ ಸ್ವದೇಶಿ ವಸ್ತುಗಳನ್ನೇ ಬಳಸಿ ತಯಾರು ಮಾಡಲಾಗಿದ್ದು ಆರೋಗ್ಯ ವರ್ಧಕವಾಗಿದೆ. ಮಕ್ಕಳ ಮೇಲೆಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ಆಹಾರ ಭದ್ರತಾ ಮಂಡಳಿಯಿಂದಲೂ ರಾಮ್ ದೇವ್ ಪರವಾನಗಿ ಪಡೆದುಕೊಂಡಿದ್ದಾರೆ.
ಈಗಾಗಲೇ ಪತಂಜಲಿಯ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದ್ದು ಜನರ ಮೆಚ್ಚುಗೆ ಗಳಿಸಿವೆ. ಸಾಮಾಜಿಕ ಜಾಲತಾಣಗಳನ್ನು ಪತಂಜಲಿ ನೂಡಲ್ಸ್ ಬಗ್ಗೆ ಚರ್ಚೆ ಆರಂಭವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


