ದೇಶ

ಸೇನಾ ಬಲ ಕಡಿತಗೊಳಿಸುವುದಾಗಿ ಚೀನಾ ಘೋಷಣೆ

ಅತಿ ದೊಡ್ಡ ಸೇನಾ ಬಲ ಹೊಂದಿರುವ ದೇಶವೆಂದೇ ಖ್ಯಾತಿಗಳಿಸಿರುವ ಚೀನಾ ಇದೀಗ ತನ್ನ ಸೇನಾ ಬಲವನ್ನು ಕಡಿತಗೊಳಿಸಲು ತೀರ್ಮಾನಿಸಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಗುರುವಾರ ಘೋಷಿಸಿದ್ದಾರೆ...

ಸೇನಾ ಬಲ ಕಡಿತಗೊಳಿಸುವುದಾಗಿ ಚೀನಾ ಘೋಷಣೆ
ಚೀನಾದ 2ನೇ ಯುದ್ಧದ 70ನೇ ವಿಜಯೋತ್ಸವ ಸಮಾರಂಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌. (ಚಿತ್ರ: ರಾಯಿಟರ್ಸ್‌ )
Published On :

ಬೀಜಿಂಗ್: ಅತಿ ದೊಡ್ಡ ಸೇನಾ ಬಲ ಹೊಂದಿರುವ ದೇಶವೆಂದೇ ಖ್ಯಾತಿಗಳಿಸಿರುವ ಚೀನಾ ಇದೀಗ ತನ್ನ ಸೇನಾ ಬಲವನ್ನು ಕಡಿತಗೊಳಿಸಲು ತೀರ್ಮಾನಿಸಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಗುರುವಾರ ಘೋಷಿಸಿದ್ದಾರೆ.

ಈ ಕುರಿತಂತೆ ಚೀನಾದಲ್ಲಿ 2ನೇ ಯುದ್ಧದ 70ನೇ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿರುವ ಅವರು, ವಿಶ್ವದ ಅತೀ ದೊಡ್ಡ ಸೇನಾ ಬಲ ಹೊಂದಿರುವ ದೇಶ ಎಂದೇ ಹೆಸರುಗಳಿಸಿರುವ ಚೀನಾ ಇದೀಗ 23 ಲಕ್ಷ ಸೈನಿಕ ಬಲ ಹೊಂದಿದ್ದು, ಇದರಲ್ಲಿ 3 ಲಕ್ಷ ಸೈನಿಕರನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

1980ರವರೆಗೆ 45 ಲಕ್ಷ ಸೈನಿಕರ ಬಲವನ್ನು ಚೀನಾ ಹೊಂದಿತ್ತು. 5 ವರ್ಷಗಳ ನಂತರ ಇದರ ಸಂಖ್ಯೆಯನ್ನು ಕಡಿತಗೊಳಿಸಿ ಈ ಸಂಖ್ಯೆಯನ್ನು 23 ಲಕ್ಷಕ್ಕೆ ಇಳಿಕೆ ಮಾಡಲಾಗಿತ್ತು. ಚೀನಾ ಇದೀಗ ರಕ್ಷಣಾ ಚಟುವಟಿಕೆಗಳಿಗೆ 145 ಬಿಲಿಯನ್ ಡಾಲರ್ ಗಳಷ್ಟು ಹಣ ಖರ್ಚು ಮಾಡುತ್ತಿದೆ. ಚೀನಾದ ಸೇನಾ ಬಲ ಇಂದಿನವರೆಗೂ ಪ್ರಾಮಾಣಿಕ ಹಾಗೂ ನಿಯತ್ತಿನಿಂದ ಕಾರ್ಯ ನಿರ್ವಹಿಸುತ್ತಾ ಬಂದಿದೆ. ತನ್ನ ತಾಯಿನಾಡಿದೆ ಸೇನೆ ಸಲ್ಲಿಸುತ್ತಿರುವ ಸೇವೆ ಅಪಾರವಾದದು. ಚೀನಾ ದೇಶದ ಆರ್ಥಿಕ ಅಭಿವೃದ್ಧಿಗಾಗಿ ಹಾಗೂ ಸೇನೆಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಸಲುವಾಗಿ ಸೇನೆಯ ಬಲವನ್ನು ಕಡಿತಗೊಳಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.