ದೇಶ

ಬಿಹಾರದ ಡಿಎನ್‍ಎ ಶ್ರೇಷ್ಠವಾದದ್ದು: ಮೋದಿ

ದಾರಿ ತಪ್ಪಿಸುವ ಎಲ್ಲ ಪ್ರಚಾರಗಳ ಹೊರತಾಗಿಯೂ, 25 ವರ್ಷಗಳ ಜಾತಿ ರಾಜಕಾರಣದ ಬಳಿಕ ಬಿಹಾರದ ಜನತೆ ಅಭಿವೃದ್ಧಿಗೆ ಮತ ಚಲಾಯಿಸಲಿದ್ದಾರೆ....

ಬಿಹಾರದ ಡಿಎನ್‍ಎ ಶ್ರೇಷ್ಠವಾದದ್ದು: ಮೋದಿ
ಪಾಟ್ನಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ
Published On :

ಪಾಟ್ನಾ: ``ದಾರಿ ತಪ್ಪಿಸುವ ಎಲ್ಲ ಪ್ರಚಾರಗಳ ಹೊರತಾಗಿಯೂ, 25 ವರ್ಷಗಳ ಜಾತಿ ರಾಜಕಾರಣದ ಬಳಿಕ ಬಿಹಾರದ ಜನತೆ ಅಭಿವೃದ್ಧಿಗೆ ಮತ ಚಲಾಯಿಸಲಿದ್ದಾರೆ.'' ಸೋನಿಯಾ, ಲಾಲು  ಪ್ರಸಾದ್, ನಿತೀಶ್ ಯಾದವ್ ಅವರ ಜಂಟಿ ವಾಗ್ದಾಳಿಯ ಬಳಿಕ ಬಿಹಾರದಲ್ಲಿ 4ನೇ ರ್ಯಾಲಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿದು.

ಮಂಗಳವಾರ ಭಾಗಲ್ಪುರದಲ್ಲಿ ಬೃಹತ್ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, ಮಹಾಮೈತ್ರಿಯ ಪಾಲುದಾರರನ್ನು ತರಾಟೆಗೆ ತೆಗೆದು ಕೊಂಡರು. ರಾಜ್ಯದ  ಹಿಂದುಳಿಯುವಿಕೆ  ಮತ್ತು ಅಭಿವೃದ್ಧಿಯ ಕೊರತೆಗೆ ಕಾಂಗ್ರೆಸ್ ಜೆಡಿಯುಆರ್‍ಜೆಡಿಯೇ ಕಾರಣ. ನನ್ನಲ್ಲಿ ಉತ್ತರ ಕೇಳುವ ಬದಲು ಸಿಎಂ ನಿತೀಶ್ ಅವರೇ ತಮ್ಮ ಸರ್ಕಾರದ ಸಾಧನೆಯ ವಿವರ  ನೀಡಲಿ. ನನ್ನ ಅಕೌಂಟ್ ಅನ್ನು ಅವಧಿ ಪೂರ್ಣವಾದಾಗ ಅಂದರೆ 2019ರಲ್ಲಿ ನೀಡುತ್ತೇನೆ ಎನ್ನುವ ಮೂಲಕ ನಿತೀಶ್‍ಗೆ ಟಾಂಗ್ ನೀಡಿದರು. ಇದೇ ವೇಳೆ, `ಬಿಹಾರದ ಡಿಎನ್‍ಎ'  ತಿರುಗುಬಾಣವಾಗುತ್ತಿರುವುದನ್ನು ಅರಿತ ಮೋದಿ ಮಂಗಳವಾರ ತಮ್ಮ ಹೇಳಿಕೆ ಬದಲಿಸಿದ್ದು, ``ಬಿಹಾರದವರು ಅತಿ ಬುದ್ಧಿವಂತರು. ಅವರ ಡಿಎನ್‍ಎ ಶ್ರೇಷ್ಠವಾದದ್ದು'' ಎಂದರು.

ತಮ್ಮನ್ನು ತಾವು ಸಾಮಾಜಿಕ ನಾಯಕರೆಂದು ಕರೆದುಕೊಳ್ಳುತ್ತಿರುವ ಲಾಲು ಮತ್ತು ನಿತೀಶ್ ಅವರು ರಾಮ್ ಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ್‍ರನ್ನು ಮರೆತು ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ  ಎಂದು ಮೋದಿ ಹೇಳಿದರು.

ಮೋದಿಯವರೇ, ಬಿಹಾರಕ್ಕೆ ಹೊಸ ಆಶ್ವಾಸನೆ ಕೊಡಬೇಡಿ ಪ್ಲೀಸ್. ನೈತಿಕ ಧೈರ್ಯ ತೋರಿಸಿ ನೀವು ಈವರೆಗೆ ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸಲು ಪ್ರಯತ್ನಿಸಿ. ಡಿಎನ್‍ಎ ಬಗ್ಗೆ ನೀಡಿದ ಹೇಳಿಕೆಯನ್ನು ವಾಪಸ್ ಪಡೆಯಿರಿ.
-ನಿತೀಶ್ ಕುಮಾರ್, ಬಿಹಾರ ಸಿಎಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.