ದೇಶ

ಬಿಹಾರ ಚುನಾವಣೆ: 4ನೇ ಹಂತದಲ್ಲಿ ಶೇ.57.59ರಷ್ಟು ಮತದಾನ

ಬಿಹಾರ ವಿಧಾನಸಭೆಗಾಗಿ ನಡೆದ ಚುನಾವಣೆಯ ನಾಲ್ಕನೇ ಹಂತದ ಮತದಾನ ಆಂತ್ಯವಾಗಿದ್ದು, ಒಟ್ಟಾರೆ ಶೇ.57.59ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ...

ಬಿಹಾರ ಚುನಾವಣೆ: 4ನೇ ಹಂತದಲ್ಲಿ ಶೇ.57.59ರಷ್ಟು ಮತದಾನ
ಬಿಹಾರ ಚುನಾವಣೆಯ ಪ್ರಯುಕ್ತ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಮತದಾರರು (ಸಂಗ್ರಹ ಚಿತ್ರ)
Published On :

ಪಾಟ್ನಾ: ಬಿಹಾರ ವಿಧಾನಸಭೆಗಾಗಿ ನಡೆದ ಚುನಾವಣೆಯ ನಾಲ್ಕನೇ ಹಂತದ ಮತದಾನ ಆಂತ್ಯವಾಗಿದ್ದು, ಒಟ್ಟಾರೆ ಶೇ.57.59ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ನಕ್ಸಲರ ದಾಳಿ ಬೆದರಿಕೆಯ ನಡುವೆಯಲ್ಲಿಯೇ ಆರಂಭವಾದ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆಗೆ ಮುಕ್ತಯಾಗೊಂಡಿದ್ದು, ಒಟ್ಟು 55 ಕ್ಷೇತ್ರಗಳಲ್ಲಿ ಶೇ.57.59ರಷ್ಟು  ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣೆಗಾಗಿ 14, 139 ಮತಗಟ್ಟೆ ಸ್ಥಾಪಿಸಲಾಗಿತ್ತು. ಚುನಾವಣೆಯಲ್ಲಿ 57 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು  776  ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆ ಸೇರಿದೆ.

ಕಳೆದ 2010ರಲ್ಲಿ 55 ಸೀಟುಗಳ ಪೈಕಿ ಬಿಜೆಪಿ ಪಕ್ಷವು 26 ಸ್ಥಾನಗಳನ್ನು ಗೆದ್ದಿತ್ತು. ಜೆಡಿಯು 24 ಸ್ಥಾನಗಳಲ್ಲಿ ಜಯಶಾಲಿಯಾಗಿತ್ತು. ಇದರಂತೆ ಆರ್‌ಜೆಡಿ 2 ಸೀಟು ಮತ್ತು ಪಕ್ಷೇತರರು ಒಂದು  ಸ್ಥಾನ ಗಳಿಸಿದ್ದರು. ಆದರೆ, ಈ ಬಾರಿ ಮಹಾಮೈತ್ರಿಕೂಟದಿಂದ ಆರ್‌ಜೆಡಿ  26 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಜೆಡಿಯು 21 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ತನ್ನ  ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಈ ಹಿಂದೆ 131 ಕ್ಷೇತ್ರಗಳಲ್ಲಿ ಮೂರು ಸುತ್ತಿನ ಮತದಾನ ನಡೆದಿದ್ದು, ಇದೀಗ ನಾಲ್ಕನೇ ಹಂತದ ಮತದಾನ ಕೂಡ ಮುಕ್ತಾಯವಾದ್ದರಿಂದ ಒಟ್ಟು 186 ಸ್ಥಾನಗಳಿಗೆ ಮತದಾನವಾದಂತಾಗಿದೆ.  ಇನ್ನುಳಿದ 5ನೇ ಹಂತದ ಮತದಾನ ಪ್ರಕ್ರಿಯೆಯು ಇದೇ ನವೆಂಬರ್ 5 ರಂದು ನಡೆಯಲಿದ್ದು, 57 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿವೆ. ನ.8ರಂದು ಮತಎಣಿಕೆ ನಡೆಯಲಿದ್ದು, ಪಕ್ಷಗಳ  ಹಣೆಬರಹ ನಿರ್ಧಾರವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.