ದೇಶ

ನ.4 ಕ್ಕೆ ಭಾರತ- ಚೀನಾ ಸಭೆ: ಪಾಕ್ ಪ್ರಾಯೋಜಿತ ಭಯೋತ್ಪಾದನೆ ಬಗ್ಗೆ ಚರ್ಚೆ

ಭಯೋತ್ಪಾದನೆಯನ್ನು ಎದುರಿಸುವ ವಿಷಯದ ಬಗ್ಗೆ ನವೆಂಬರ್ 4 ರಂದು ಭಾರತ- ಚೀನಾ ಸಭೆ ನಡೆಸಲಿದ್ದು ಭಾರತ ಸರ್ಕಾರ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಕುರಿತು ಮಾತನಾಡಲಿದೆ.

ನ.4 ಕ್ಕೆ ಭಾರತ- ಚೀನಾ ಸಭೆ: ಪಾಕ್ ಪ್ರಾಯೋಜಿತ ಭಯೋತ್ಪಾದನೆ ಬಗ್ಗೆ ಚರ್ಚೆ
ಭಾರತ-ಚೀನಾ
Published On :
ನವದೆಹಲಿ: ಭಯೋತ್ಪಾದನೆಯನ್ನು ಎದುರಿಸುವ ವಿಷಯದ ಬಗ್ಗೆ ನವೆಂಬರ್ 4 ರಂದು ಭಾರತ- ಚೀನಾ ಸಭೆ ನಡೆಸಲಿದ್ದು ಭಾರತ ಸರ್ಕಾರ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಕುರಿತು ಮಾತನಾಡಲಿದೆ. 
ಕೇಂದ್ರ ಸರ್ಕಾರದ ಅಧಿಕಾರಿಗಳ ಪ್ರಕಾರ, ಚೀನಾದಲ್ಲೂ ಅಪಾಯವನ್ನು ಉಂಟುಮಾಡುವ ಶಕ್ತಿಗಳು ವೇಗವಾಗಿ ಬೆಳವಣಿಗೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾದೊಂದಿಗೆ ಪಾಕಿಸ್ತಾನದ ಭಯೋತ್ಪಾದನೆಯ ಬಗ್ಗೆ ಮಾತನಾಡುವುದು ಅಗತ್ಯವಿದೆ. ಭಾರತ ಸರ್ಕಾರ ಇತ್ತೀಚೆಗಷ್ಟೇ ಚೀನಾದ ಸಂಸ್ಥೆಗಳಿಗೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉದ್ಯಮ ಪ್ರಾರಂಭಿಸಲು ಅಗತ್ಯವಿರುವ ನಿಯಮಗಳನ್ನು ಸಡಿಲಗೊಳಿಸಿತ್ತು. ಇದರಿಂದಾಗಿ ಭಾರತ- ಚೀನಾ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳಲಿದೆ. 
ಉದ್ಯಮದ ವಿಷಯವನ್ನು ಹೊರತುಪಡಿಸಿ ಭಾರತ- ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಬಲಗೊಳ್ಳಲು ಕಾರಣವಾಗುವ ಅನೇಕ ಅಂಶಗಳಿದ್ದು, ಈ ಪೈಕಿ ಭಯೋತ್ಪಾದನೆಯೂ ಒಂದಾಗಿದೆ.  ಜನವರಿಯಲ್ಲಿ ಅಫ್ಘಾನಿಸ್ಥಾನ ಪಾಕಿಸ್ತಾನ ಭಯೋತ್ಪಾದನಾ ಸಂಘಟನೆಗಳಲ್ಲಿ ತರಬೇತಿ ಪಡೆದಿದ್ದ ಶಂಕಿತ ಉಯ್ಘರ್‌ ತೀವ್ರವಾದಿಗಳನ್ನು ಚೀನಾ ವಶಕ್ಕೆ ನೀಡಿದ್ದು ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ಚೀನಾಗೆ ಅರಿವಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.  
ಚೀನಾದ ಕ್ಸಿನ್ಜಿಯಾಂಗ್ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಉಯ್ಘರ್‌ ತೀವ್ರವಾದಿಗಳು ಯತ್ನಿಸುತ್ತಿದ್ದು, ಸುಮಾರು 300 ತೀವ್ರವಾದಿಗಳು ಇಸ್ಲಾಮಿಕ್ ಸ್ಟೇಟ್ ಸೇರಲು ಸಿರಿಯಾಗೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಚೀನಾ ಸಹ ಭಯೋತ್ಪಾದನೆಯ ಅಪಾಯ ಎದುರಿಸುತ್ತಿದ್ದು, ಉಗ್ರವಾದ ನಿಗ್ರಹದ ವಿಷಯಕ್ಕೆ ಸಂಬಂಧಿಸಿದ ಸಭೆ ಭಾರತ- ಚೀನಾಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.