ದೇಶ

ವಿಚ್ಛೇದನ: ವಿದ್ಯಾವಂತ ಪತ್ನಿಗೂ ಜೀವನಾಂಶ ನೀಡಬೇಕು-ಹೈಕೋರ್ಟ್

ವಿದ್ಯಾವಂತೆ ಹಾಗೂ ಉದ್ಯೋಗ ಪಡೆಯಲು ಅರ್ಹತೆ ಇರುವ ವಿಚ್ಛೇದಿತ ಪತ್ನಿಗೆ ಆಕೆಯ ಜೀವನ ನಿರ್ವಹಣೆಗಾಗಿ ಪತಿ ಹಣ...

ವಿಚ್ಛೇದನ: ವಿದ್ಯಾವಂತ ಪತ್ನಿಗೂ ಜೀವನಾಂಶ ನೀಡಬೇಕು-ಹೈಕೋರ್ಟ್
ಮದ್ರಾಸ್ ಹೈಕೋರ್ಟ್
Published On :
ಮಧುರೈ: ವಿದ್ಯಾವಂತ ಹಾಗೂ ಉದ್ಯೋಗ ಪಡೆಯಲು ಅರ್ಹತೆ ಇರುವ ವಿಚ್ಛೇದಿತ ಪತ್ನಿಗೆ ಆಕೆಯ ಜೀವನ ನಿರ್ವಹಣೆಗಾಗಿ ಪತಿ ಹಣ ಕೊಡಲೇಬೇಕು ಎಂದು ವಿಚ್ಛೇದನ ಪ್ರಕರಣವೊಂದರಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ವಿಭಾಗೀಯ ಪೀಠ ತೀರ್ಪು ನೀಡಿದೆ.
ಪತ್ನಿ ಉತ್ತಮ ಶಿಕ್ಷಣ ಪಡೆದಿದ್ದು, ಕೆಲಸಕ್ಕೆ ಹೋಗುವ ಅರ್ಹತೆ ಹೊಂದಿದ್ದರೂ ವಿಚ್ಛೇದನ ನೀಡುವ ಪತಿ ಆಕೆಗೆ ಜೀವನ ನಿರ್ವಣೆಗಾಗಿ ಹಣ ನೀಡಲೇಬೇಕು ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಾಮೂರ್ತಿಗಳಾದ ಎಸ್ ವಿಮಲಾ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ವಿಚ್ಛೇದನ ಪ್ರಕರಣವೊಂದರಲ್ಲಿ ವಿದ್ಯಾವಂತೆ ಮಹಿಳೆಯೊಬ್ಬಳು ತನ್ನ ವಿಚ್ಛೇದಿತ ಪತಿಯಿಂದ ತಿಂಗಳಿಗೆ ರು.10,000 ಜೀವನಾಂಶ ಕೇಳಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಆಕೆಯ ಅರ್ಜಿಯನ್ನು ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಳ್ಳಿ ಹಾಕಿತ್ತು.
ಇದನ್ನು ಪ್ರಶ್ನಿಸಿ ಆ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾನು ವಿದ್ಯಾವಂತಳಾಗಿದ್ದರೂ ಕೂಡ ಮಕ್ಕಳ ಪಾಲನೆಯಲ್ಲಿ ಹೆಚ್ಚು ತೊಡಗಿಸಕೊಳ್ಳಬೇಕಾಗಿದೆ. ಹಾಗಾಗಿ ನನಗೆ ವಿಚ್ಛೇದನ ನೀಡಿರುವ ಪತಿಯಿಂದ ಜೀವನಾಂಶ ಕೊಡಿಸಿ ಎಂದು ಹೈಕೋರ್ಟ್ ಮೊರೆ ಹೋಗಿದ್ದಳು. 
ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಮಲಾ, ಪತ್ನಿ ಉನ್ನತ ಮಟ್ಟದಲ್ಲಿ ವ್ಯಾಸಂಗ ಮಾಡಿದ್ದರೂ ಆಕೆ ತನ್ನ ಮಕ್ಕಳನ್ನು ನೋಡಿಕೊಳ್ಳಬೇಕಾಗುತ್ತದೆ. ಆಕೆ ವಿದ್ಯಾವಂತಳಾಗಿದ್ದಾಳೆ, ಆಕೆ ಉದ್ಯೋಗಕ್ಕೆ ಹೋಗಬಹುದು ಎಂದು ಹೇಳಿದರೆ ಸರಿಬರುವುದಿಲ್ಲ. ಆಕೆ ಉದ್ಯೋಗಕ್ಕೆ ಹೋದರೆ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಕ್ಕಳು ದೊಡ್ಡವರಾಗುವವರೆಗೆ ಅವರ ಪಾಲನೆ ತಾಯಿಗೆ ಮುಖ್ಯವಾಗಿರುವತ್ತದೆ. ಹಾಗಾಗಿ ಜೀವನ ನಿರ್ವಹಣೆಗೆ ಪತಿ ಹಣ ನೀಡಬೇಕು, ಶಿಕ್ಷಣದ ನೆಪವೊಡ್ಡಿ ನಿರ್ವಹಣೆ ನೀಡಲು ನಿರಾಕರಿಸುವಂತಿಲ್ಲ ಎಂದು ನ್ಯಾಯಾಮೂರ್ತಿಗಳು ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.