ದೇಶ

ವಿದೇಶಕ್ಕೆ ಹೋಗಲು ಪಚೌರಿಗೆ ಅನುಮತಿ

ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ ಮಾಜಿ ಅಧ್ಯಕ್ಷ ಆರ್ ಕೆ ಪಚೌರಿ...

ವಿದೇಶಕ್ಕೆ ಹೋಗಲು ಪಚೌರಿಗೆ ಅನುಮತಿ
ಆರ್ ಕೆ ಪಚೌರಿ
Published On :
ನವೆದೆಹಲಿ: ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ ಮಾಜಿ ಅಧ್ಯಕ್ಷ ಆರ್ ಕೆ ಪಚೌರಿ ಅವರಿಗೆ ವಿದೇಶ ಪ್ರಯಾಣ ಬೆಳೆಸಲು ಕೊರ್ಟ್ ಅನುಮತಿ ನೀಡಿದೆ.
ಕುವೈತ್ ಮತ್ತು ಸೊಮಾಲಿಯಾದಲ್ಲಿ ನಡೆಯುವ ವಿಚಾರಣ ಸಂಕಿರಣದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಪಚೌರಿ ದೆಹಲಿ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ನವೆಂಬರ್ 1ರಿಂದ 6 ವರೆಗೆ ವಿದೇಶದಲ್ಲಿರಲು ಅನುಮತಿ ನೀಡಿದ್ದು, 7ರ ಒಳಗಾಗಿ ಸ್ವದೇಶಕ್ಕೆ ಹಿಂದಿರುಗುವಂತೆ ಸೂಚಿಸಿದೆ. 
ತನ್ನ ಕಾರ್ಯಾಲಯದಲ್ಲಿ ಮಹಿಳಾ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಪಚೌರಿ ಎದುರಿಸುತ್ತಿದ್ದರು. ಕುವೈತ್ ಮತ್ತು ಸೊಮಾಲಿಯಾದಲ್ಲಿ ನಡೆಯುವ ವಿಚಾರಣ ಸಂಕಿರಣದಲ್ಲಿ ಪಾಲ್ಗೊಳ್ಳಲು ಕೋರ್ಟ್ ಅನುಮತಿ ನೀಡಿದೆ. ನವೇಂಬರ್ 1ರಿಂದ ಪಚೌರಿ ಪ್ರಯಾಣ ಬೆಳಸಲಿದ್ದು, ನವೆಂಬರ್ 1ರಿಂದ 3 ರವರೆಗೆ ಕುವೈತ್ ನಲ್ಲಿ 3ರ ನಂತರ ಸೋಮಾಲಿಯಾದಲ್ಲಿ ನಡೆಯುವ ವಿಚಾರಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. 
ಫೆಬ್ರವರಿ 13ರಂದು ಪಚೌರಿ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. 354 (ಆಕ್ರಮಣ ಅಥವಾ ಆಕ್ರೋಶ ಉದ್ದೇಶದಿಂದ ಮಹಿಳೆಗೆ ಕಿರುಕುಳ), 354(ಡಿ) (ಕಿರುಕುಳ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿ ಕೇಸು ದಾಖಲಿಸಿಕೊಳ್ಳಲಾಗಿದೆ. 
ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದ 29 ವರ್ಷದ ಸಂಶೋಧನ ಸಹಾಯಕಿಯಾಗಿರುವ ಸಂತ್ರಸ್ತೆಯು 2013ರ ಅಕ್ಟೋಬರ್ ನಿಂದ 2015ರ ಜನವರಿ ತನಕದ ಅವಧಿಯಲ್ಲಿ ತನ್ನೊಂದಿಗೆ ವಿನಿಮಯಿಸಿಕೊಳ್ಳಲಾಗಿರುವ ಇಮೇಲ್, ಪಠ್ಯಗಳು ಮತ್ತು ವಾಟ್ಸಪ್ ಸಂದೇಶಗಳ ವಿವರಗಳನ್ನ ತನಿಖೆಗೆ ಒಪ್ಪಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.