ದೇಶ

ಲಷ್ಕರ್, ತಾಲಿಬಾನ್‍ಗೆ ತರಬೇತಿ ನೀಡಿದ್ದು ನಾವೇ ಎಂದ ಮುಷರ್ರಫ್!

``ಲಷ್ಕರ್, ತಾಲಿಬಾನ್, ಹಖನಿ ನೆಟ್‍ವರ್ಕ್, ಹಫೀಜ್ ಸಯೀದ್‍ಗೆ ತರಬೇತಿ ನೀಡಿದ್ದೇ ಪಾಕಿಸ್ತಾನ. ನಾವೇ ಉಗ್ರರನ್ನು ಪೋಷಿಸಿ, ಭಾರತ, ಆಫ್ಘನ್‍ಗೆ ಕಳುಹಿಸುತ್ತಿದ್ದೇವೆ.'' ಇಂತಹುದೊಂದು ಆಘಾತಕಾರಿ ವಿಷಯ ಹೊರಹಾಕಿದ್ದು ಬೇರಾರೂ ಅಲ್ಲ...

ಲಷ್ಕರ್, ತಾಲಿಬಾನ್‍ಗೆ ತರಬೇತಿ ನೀಡಿದ್ದು ನಾವೇ ಎಂದ ಮುಷರ್ರಫ್!
ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರ್ರಫ್ (ಸಂಗ್ರಹ ಚಿತ್ರ)
Published On :

ಇಸ್ಲಾಮಾಬಾದ್: ``ಲಷ್ಕರ್, ತಾಲಿಬಾನ್, ಹಖನಿ ನೆಟ್‍ವರ್ಕ್, ಹಫೀಜ್ ಸಯೀದ್‍ಗೆ ತರಬೇತಿ ನೀಡಿದ್ದೇ ಪಾಕಿಸ್ತಾನ. ನಾವೇ ಉಗ್ರರನ್ನು ಪೋಷಿಸಿ, ಭಾರತ, ಆಫ್ಘನ್‍ಗೆ ಕಳುಹಿಸುತ್ತಿದ್ದೇವೆ.'' ಇಂತಹುದೊಂದು ಆಘಾತಕಾರಿ ವಿಷಯ ಹೊರಹಾಕಿದ್ದು ಬೇರಾರೂ ಅಲ್ಲ. ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರ್ರಫ್.

ಪಾಕ್‍ನ ದುನ್ಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಈ ಸ್ಪೋಟಕ ಮಾಹಿತಿ ಬಹಿರಂಗಪಡಿಸಿರುವ ಅವರು, ``ಉಗ್ರರು ಮತ್ತು ಉಗ್ರ ಸಂಘಟನೆಗಳು ಪಾಕ್ ಸರ್ಕಾರ ಮತ್ತು ಸೇನೆಗೆ `ಹೀರೋ'ಗಳಿದ್ದಂತೆ. ಕಾಶ್ಮೀರಕ್ಕೆ ಉಗ್ರರನ್ನು ಕಳುಹಿಸುತ್ತಿರುವುದೂ ಪಾಕಿಸ್ತಾನವೇ.

ಲಾಡೆನ್, ಜವಾಹಿರಿ, ಹಖನಿಯನ್ನು ಬೆಳೆಸಿದ್ದೂ ನಾವೇ. ಲಾಡೆನ್ ಹಾಗೂ ಸಯೀದ್ ಅಂತೂ ನಮ್ಮ ಹೀರೋ ಎಂದೂ ಹೇಳಿದ್ದಾರೆ. ಗಡಿ ದಾಟಿ ಇಲ್ಲಿಗೆ ತಲುಪಿ ಜಿಹಾದ್ ನಡೆಸುತ್ತಿರುವ ಕಾಶ್ಮೀರಿಗಳು ಕೂಡ ನಮ್ಮ ಪಾಲಿನ ನಾಯಕರು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.